ಸುಳ್ಯ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅನರ್ಹತೆಯನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ದೇಶಾದ್ಯಂತ ಕಾಂಗ್ರೆಸ್ ನಾಯಕರು ಮೌನ ಪ್ರತಿಭಟನೆ ನಡೆಸುತ್ತಿದ್ದು ಇದರ ಅಂಗವಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುಳ್ಯ ಮಿನಿ ವಿಧಾನಸಭಾ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುತಿದೆ.
ಜು.12ರಂದು ಪೂ.10 ಗಂಟೆಯಿಂದ ಸಂಜೆ 5 ಗಂಟೆಯ ತನಕ
ಪ್ರತಿಭಟನೆ ನಡೆಯಲಿದೆ.ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಕೆಪಿಸಿಸಿ ಸದಸ್ಯ ಭರತ್ ಮುಂಡೋಡಿ, ಕೆಪಿಸಿಸಿ ಸಂಯೋಜಕ ಜಿ.ಕೃಷ್ಣಪ್ಪ, ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್, ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಮುಸ್ತಫ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಡಿಸಿಸಿ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಕೋಶಾಧಿಕಾರಿ ವಿಶ್ವನಾಥ ರೈ ಕಳಂಜ, ನಗರ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಅಂಬೆಕಲ್ಲು, ಪ್ರಮುಖರಾದ
ರಾಜೀವಿ ರೈ, ಬೆಟ್ಟ ರಾಜಾರಾಮ್ ಭಟ್, ಮಹಮ್ಮದ್ ಕುಂಞಿ ಗೂನಡ್ಕ, ತೇಜಕುಮಾರ್ ಬಡ್ಡಡ್ಕ, ಮೂಸಾ ಕುಂಞಿ ಪೈಂಬೆಚ್ಚಾಲ್ ಶಾಫಿ ಕುತ್ತಮೊಟ್ಟೆ, ಶ್ರೀಲತಾ ಪ್ರಸನ್ನ, ಅಶೋಕ್ ಚೂಂತಾರು, ನಂದರಾಜ ಸಂಕೇಶ, ಪ್ರವೀಣಾ ಮರುವಂಜ, ರಹೀಂ ಬೀಜದಕಟ್ಟೆ, ಶಹೀದ್ ಪಾರೆ, ಸಿದ್ದಿಕ್ ಕೊಕ್ಕೊ, ಪವಾಝ್ ಕನಕಮಜಲು, ಲೀಲಾ ಮನಮೋಹನ್, ಪರಮೇಶ್ವರ ಕೆಂಬಾರೆ, ಡೇವಿಡ್ ಧೀರಾ ಕ್ತಾಸ್ತಾ, ಶರೀಪ್ ಕಂಠಿ, ರಿಯಾಝ್ ಕಟ್ಟೆಕ್ಕಾರ್, ಚಂದ್ರಲಿಂಗಂ, ಮಂಜುನಾಥ್ ಕುಕ್ಕುಜೆ, ಎಸ್.ಕೆ, ಹನೀಫ, ಉಮ್ಮರ್ ಕುರುಂಜಿಗುಡ್ಡೆ, ಇಬ್ರಾಹಿಂ ಶಿಲ್ಪಾ, ಸುರೇಶ್ ಕಾಮತ್, ರಾಜು ಪಂಡಿತ್, ಸತ್ಯಕುಮಾರ್ ಆಡಿಂಜ, ಶರೀಫ್ ಕಂಠಿ, ಅಬ್ದುಲ್ ಗಫೂರ್ ಕಲ್ಮಡ್ಕ, ಎ.ಕೆ, ಇಬ್ರಾಹಿಂ ಕಲ್ಲುಗುಂಡಿ, ಹಾಜಿರಾ ಗಫೂರ್ ಕಲ್ಮಡ್ಕ, ಹರೀಶ್ ಹುದೇರಿ, ಅನುಸೂಯ ಪೆರುವಾಜೆ, ಸುರೇಶ್ ಎಂ.ಎಚ್, ಜೂಲಿಯಾ ಕ್ರಾಸ್ತಾ, ಗಂಗಾಧರ ಮೇನಾಲ, ಕರುಣಾಕರ ಮಡ್ತಿಲ, ಜತ್ತಪ್ಪ ಗೌಡ ಉಬರಡ್ಕ, ರಂಜಿತ್ ರೈ ಮೇನಾಲ, ಅನಿಲ್ ಬಳ್ಳಡ್ಕ, ಚಿತ್ರಾ ಕುಮಾರಿ, ಸೋಮಯ್ಯ ಗೌಡ ಮಡ್ತಿಲ, ಧರ್ಮಪಾಲ ಕೊಯಿಂಗಾಜೆ ಉಪಸ್ಥಿತರಿದ್ದರು.