ಸುಳ್ಯ: ಸುಳ್ಯ ವೃತ್ತ ನಿರೀಕ್ಷಕರಾಗಿದ್ದ ನವೀನ್ ಚಂದ್ರ ಜೋಗಿ ಅವರ ವರ್ಗಾವಣೆ ಆದೇಶ ರದ್ದಾಗಿದೆ. ಉಡುಪಿ ಸೆನ್ ಪೊಲೀಸ್ ಠಾಣೆಗೆ ಸಿಐ ಆಗಿ ನವೀನ್ ಚಂದ್ರ ಜೋಗಿ ಅವರನ್ನು ವರ್ಗಾವಣೆ ಮಾಡಿ ಸರಕಾರ ಕೆಲವು ದಿನಗಳ ಹಿಂದೆ ಆದೇಶ ಮಾಡಿತ್ತು. ವರ್ಗಾವಣೆ ಆದ ಕಾರಣ
ಕೆಲವು ದಿನಗಳ ಹಿಂದೆ ಸುಳ್ಯದಿಂದ ರಿಲೀವ್ ಆಗಿ ಉಡುಪಿ ಸೆನ್ ಠಾಣೆಯಲ್ಲಿ ಅಧಿಕಾರ ಸ್ವೀಕರಿಸಲು ತೆರಳಿದ್ದರು. ಇದೀಗ ಅವರ ವರ್ಗಾವಣೆ ಆದೇಶವನ್ನು ರದ್ದು ಮಾಡಿ ಸರಕಾರ ಆದೇಶ ಮಾಡಿದೆ. ವರ್ಗಾವಣೆ ಆದೇಶ ರದ್ದಾಗಿರುವ ಹಿನ್ನಲೆಯಲ್ಲಿ ಅವರು ಮರಳಿ ಸುಳ್ಯ ವೃತ್ತ ನಿರೀಕ್ಷಕರಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯ ಠಾಣೆಗಳನ್ನು ಒಳಗೊಂಡ ಸುಳ್ಯ ವೃತ್ತದ ಇನ್ಸ್ಪೆಕ್ಟರ್ ಆಗಿ ನವೀನ್ ಚಂದ್ರ ಜೋಗಿಯವರು ಕಳೆದ ಮೂರೂವರೆ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.