ಸುಳ್ಯ: ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿರುವುದನ್ನು ಖಂಡಿಸಿ ಹಿಂದೂ ಸಂಘಟನೆಗಳು ಕರೆ ನೀಡಿರುವ ಬಂದ್ಗೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸುಳ್ಯ ಹಾಗು ಬೆಳ್ಳಾರೆ ಪೇಟೆಯಲ್ಲಿ ಬಂದ್ ಪೂರ್ಣವಾಗಿದೆ.ಎಲ್ಲಾ ಅಂಗಡಿ

ಮುಂಗಟ್ಟುಗಳು ಬಂದ್ ಆಗಿದೆ. ಮೆಡಿಕಲ್ ಮತ್ತು ಪೆಟ್ರೋಲ್ ಬಂಕ್ ಮತ್ತಿತರ ಅಗತ್ಯ ವಸ್ತುಗಳ ಅಂಗಡಿಗಳು ಮಾತ್ರ ತೆರೆದಿತ್ತು. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಸುಳ್ಯ, ಬೆಳ್ಳಾರೆ, ಸೇರಿ ಸುಳ್ಯ ತಾಲೂಕಿನ ಬಹುತೇಕ ಪೇಟೆ ಬಂದ್ ಆಗಿದೆ. ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಸುಳ್ಯ ಪೇಟೆಯಲ್ಲಿ ಟಯರ್ ಉರಿಸಿ ಪ್ರತಿಭಟನೆ ನಡೆಸಲು ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರು ಇದಕ್ಕೆ ತಡೆಯೊಡ್ಡಿದರು. ಎಲ್ಲರೂ ಸ್ಥಳದಿಂದ ತೆರಳುವಂತೆ ಪೊಲೀಸರು ಸೂಚಿಸಿದರು ಸಂದರ್ಭದಲ್ಲಿ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.