ಸುಳ್ಯ:ಸುಳ್ಯ ತಾಲೂಕು ರಚನೆಗೊಂಡು 60 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಸುಳ್ಯಕ್ಕೆ 60 ವರ್ಷ ಸಂಭ್ರಮಾಚರಣೆ ಮಾಡುವ ಕುರಿತು ತಾಲೂಕು ಆಡಳಿತ ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಪೂರ್ವಭಾವಿ ಸಭೆಯು ಶುಕ್ರವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸುಳ್ಯ ತಾಹಶೀಲ್ದಾರ್ ಮಂಜುಳ.ಎಂ ವಹಿಸಿ ಮಾತನಾಡಿ ಸುಳ್ಯ ತಾಲೂಕು ಬೆಳೆದು ಬಂದ ಹಾದಿ ಹಾಗೂ
ಸುಳ್ಯದ ವಿಶೇಷತೆ ಬಗ್ಗೆ ಬೆಳಕು ಚೆಲ್ಲುವ ಸಂಭ್ರಮಾಚರಣೆ ಕಾರ್ಯಕ್ರಮ ಡಿ.26ರಂದು ಅದ್ದೂರಿ ನಡೆಸುವ ಚಿಂತನೆ ನಡೆಸಲಾಗಿದೆ.ಎಲ್ಲರನ್ನೂ ಸೇರಿಸಿಕೊಂಡು ಸುಳ್ಯ ತಾಲೂಕಿನ 60ರ ಸಂಭ್ರಮವನ್ನು ಆಕರ್ಷಕ ಮೆರವಣಿಗೆ, ತಾಲೂಕಿನ ಸಾಧಕರನ್ನು ಸನ್ಮಾನಿಸುವ ಹಾಗೂ ಸಾರ್ವಜನಿಕ ಸಭಾ ಕಾರ್ಯಕ್ರಮ ಮೂಲಕ ನಡೆಸುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ ಎಂದರು. ಸಮಾರಂಭದ ರೂಪುರೇಷೆ ತಯಾರಿಸಲು
ಮುಂದಿನ ಮಂಗಳವಾರ ಸಭೆಯನ್ನು ನಿಗದಿ ಪಡಿಸಲಾಯಿತು.

ಪ್ರಮುಖರಾದ ಎಸ್.ಎನ್ ಮನ್ಮಥ ಹಾಗೂ ರಾಧಾಕೃಷ್ಣ ಬೊಳ್ಳೂರು ಮಾತನಾಡಿ ಸುಳ್ಯ ನಡೆದುಬಂದ ಹಾದಿ ಸುಳ್ಯದ ಸಮಗ್ರ ಅಭಿವೃದ್ಧಿ ಬಿಂಬಿಸುವ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಮುಂದಿನ ಮಂಗಳವಾರ ನಡೆಯುವ ಸಭೆಯಲ್ಲಿ ಸಂಪೂರ್ಣ ಮಾಹಿತಿ ನೀಡುವಂತೆ ಹಾಗೂ ಸಭೆಯ ಅಂತಿಮ ರೂಪುರೇಷೆ ತಯಾರಿಸುವಂತೆ ಸೂಚಿಸಿದರು.
ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ , ಪಶುವೈದ್ಯಕೀಯ ಪರಿಷತ್ ಕರ್ನಾಟಕ ಇದರ ನಿರ್ದೇಶಕ ಸುಳ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ನಿತಿನ್ ಪ್ರಭು, ಪ್ರಮುಖರಾದ ಎಸ್.ಎನ್. ಮನ್ಮಥ , ರಾಧಾಕೃಷ್ಣ ಬೊಳ್ಳುರು, ಪತ್ರಕರ್ತ ಹರೀಶ್ ಬಂಟ್ವಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ತಾಲೂಕು ಇಲಾಖಾಧಿಕಾರಿಗಳು ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷರು ಹಾಗೂ ಸಂಘ ಸಂಸ್ಥೆಗಳ ಪಧಾಧಿಕಾರಿಗಳು ಉಪಾಧ್ಯಕ್ಷರು.
ಕಾರ್ಯಕ್ರಮದ ಯಶಸ್ವಿಗೆ ಸಮಿತಿಯನ್ನು ರಚಿಸಲಾಯಿತು.












