ಸುಳ್ಯ:ಸುಳ್ಯ ತಾಲೂಕು ರಚನೆಯಾಗಿ 60 ವರ್ಷ ತುಂಬಿದ ಹಿನ್ನಲೆಯಲ್ಲಿ ಸುಳ್ಯ 60 ಸಂಭ್ರಮಾಚರಣೆ ಸುಳ್ಯದ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.ಕಾರ್ಯಕ್ರಮಕ್ಕೆ ಮುನ್ನ ಸುಳ್ಯ ನಗರದಲ್ಲಿ ವೈಭವದ ಆಕರ್ಷಕ ಮೆರಚಣಿಗೆ ನಡೆಯಿತು.ಬೆಳಿಗ್ಗೆ ಸುಳ್ಯದ ಶಾಸ್ತ್ರಿ ವೃತ್ತದಿಂದ ಶ್ರೀ ಕುರುಂಜಿ ಜಾನಕಿ ವೆಂಕಟ್ರಮಣ ಸಭಾಂಗಣದವರೆಗೆ
ಭವ್ಯವಾದ ಮೆರವಣಿಗೆ ನಡೆಯಿತು. ಗೊಂಬೆ, ಚೆಂಡೆ ವಾದ್ಯ ಘೋಷಗಳು ಆಕರ್ಷಕ ಮೆರವಣಿಗೆಗೆ ಸಾಥ್ ನೀಡಿತು. ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಅಧ್ಯಕ್ಷರಾದ ಡಾ.ರೇಣುಕಾಪ್ರಸಾದ್ ಕೆ.ವಿ. ಮೆರವಣಿಗೆಗೆ ಚಾಲನೆ ನೀಡಿದರು.

ಚೆಂಡೆ ಬಾರಿಸುವ ಮೂಲಕ ಡಾ.ರೇಣುಕಾ ಪ್ರಸಾದ್ ಅವರು ಚಾಲನೆ ನೀಡಿದರೆ, ಶಾಸಕಿ ಭಾಗೀರಥಿ ಮುರುಳ್ಯ ತೆಂಗಿನ ಕಾಯಿ ಒಢಯುವ ಮೂಲಕ ಉದ್ಘಾಟಿಸಿದರು. ಸುಳ್ಯ 60 ಸಂಭ್ರಮಾಚರಣೆ ಸಮಿತಿಯ
ಕಾರ್ಯಧ್ಯಕ್ಷ ಎಸ್ ಎನ್ ಮನ್ಮಥ, ಸಂಚಾಲಕರಾದ ರಾಧಾಕೃಷ್ಣ ಬೊಳ್ಳೂರು, ಹರೀಶ್ ಕಂಜಿಪಿಲಿ, ಉಪಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್, ಸದಾನಂದ ಮಾವಜಿ,

ಸಹ ಸಂಚಾಲಕ ಸಂತೋಷ್ ಕುತ್ತಮೊಟ್ಟೆ,ಪ್ರಧಾನ ಕಾರ್ಯದರ್ಶಿ ಹರೀಶ್ ಬಂಟ್ವಾಳ್,ಕೋಶಾಧಿಕಾರಿ ಜಾಕೆ ಸಂತೋಷ್, ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ,ಸಂಘಟನಾ ಕಾರ್ಯದರ್ಶಿ ಕೆ.ಎಂ ಮುಸ್ತಾಫ, ವೆಂಕಟ್ ದಂಬೆಕೋಡಿ ಮತ್ತಿತರರು ಉಪಸ್ಥಿತರಿದ್ದರು.
ಮೆರವಣಿಗೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.













