ಸುಳ್ಯ: ಪುತ್ತೂರು ಉಪ ವಿಭಾಗದ ಸಹಾಯಕ ಕಮಿಶನರ್ ಆಗಿ ಅಧಿಕಾರ ಸ್ವೀಕರಿಸಿದ ಸ್ಟಲ್ಲಾ ವರ್ಗೀಸ್ ಅವರನ್ನು ಸುಳ್ಯ ಯೋಜನಾ ಪ್ರಾಧಿಕಾರ ಅಧ್ಯಕ್ಷ ನೇಮಕಗೊಂಡ ಕೆ. ಎಂ.ಮುಸ್ತಫ ಪುತ್ತೂರು ಎಸಿ ಕಚೇರಿ ಯಲ್ಲಿ ಭೇಟಿಯಾದರ.ಈ ಸಂದರ್ಭದಲ್ಲಿ
ಸುಳ್ಯ ನಗರ ಪಂಚಾಯತ್ ಪೌರ ಕಾರ್ಮಿಕರಿಗೆ ನಿವೇಶನ ಮಂಜೂರಾಗದೆ ಗೃಹ ಭಾಗ್ಯ ಯೋಜನೆ ವಿಳಂಬ ವಾಗುತ್ತಿದ್ದು ಎಸಿ ಕಚೇರಿಯಲ್ಲಿರುವ ಪ್ರಸ್ತಾವನೆಗೆ ಮಂಜೂರಾತಿ ನೀಡಿ ಜಮೀನು ಸ್ವಾದೀನತೆ ನೀಡುವಂತೆ ವಿನಂತಿಸಿದರು.
ಕೂಡಲೇ ಮಂಜೂರಾತಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಟಿ. ಎಂ. ಶಹೀದ್ ಉಪಸ್ಥಿತರಿದ್ದರು.