ಸುಳ್ಯ:ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕ ಗೊಂಡಿರುವ ಕೆ.ಎಂ.ಮುಸ್ತಫಾ ಅವರು 17 ರಂದು ಅಧಿಕಾರ ಸ್ವೀಕರಿಸಿದರು.ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಯೋಜನಾ ಪ್ರಾಧಿಕಾರದ ಯೋಜನಾ ನಿರ್ದೇಶಕರಾದ ಪ್ರವೀಣ್ ಕುಮಾರ್ ನೂತನ ಸೂಡಾ ಅಧ್ಯಕ್ಷ ಮುಸ್ತಫಾ ಅವರಿಗೆ ಅಧಿಕಾರ ಪತ್ರವನ್ನು ಹಸ್ತಾಂತರಿಸಿದರು.ಬಳಿಕ ಮಾತನಾಡಿದ
ಅವರು ಸುಳ್ಯದ ಜನತೆಗೆ ಪ್ರಾಧಿಕಾರವು ಬಹಳ ಪ್ರಯೋಜನಕಾರಿಯಾಗಲಿದೆ.ಸುಳ್ಯದ ಜನತೆ ಇದಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಗಳಿಗೆ ಮಂಗಳೂರಿಗೆ ಬರಬೇಕಾದ ಅವಶ್ಯಕತೆ ಇರುತ್ತಿತ್ತು. ಅಲ್ಲದಿದ್ದಲ್ಲಿ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸುಳ್ಳಕ್ಕೆ ಬರುವುದನ್ನು ಕಾಯುವಂತ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ಸುಳ್ಯದಲ್ಲಿಯೇ ಕಚೇರಿ ಮತ್ತು ಅದಕ್ಕೆ ಸಂಬಂಧಪಟ್ಟ ಸಿಬ್ಬಂದಿಗಳು ಅಧಿಕಾರಿಗಳನ್ನು ಒಳಗೊಂಡ ಕಚೇರಿ ಆಗಲಿದ್ದು ಸಾರ್ವಜನಿಕರಿಗೆ ತುಂಬಾ ಸಹಕಾರಿಯಾಗಲಿದೆ ಎಂದು ಹೇಳಿದರು.

ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಳ್ಯದ ಹಲವಾರು ಸಂಘ ಸಂಸ್ಥೆಗಳ ಮುಖಂಡರು ನಗರ ಪಂಚಾಯತಿನ ಸದಸ್ಯರುಗಳು ಸಿಬ್ಬಂದಿ ವರ್ಗದವರು ರಾಜಕೀಯ ಪಕ್ಷಗಳ ಹಿರಿಯ ಕಿರಿಯ ಮುಖಂಡರುಗಳು ಹಾಗೂ ಮುಸ್ತಫಾರವರ ಅಭಿಮಾನಿ ಬಳಗದವರು ಹೂಗುಚ್ಛ ಹಾಗೂ ಹಾರವನ್ನು ಹಾಕಿ ನೂತನ ಅಧ್ಯಕ್ಷರಿಗೆ ಶುಭಾರೈಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಹೀದ್ ತೆಕ್ಕಿಲ್,ನ. ಪಂ ಸದಸ್ಯ ಎಂ ವೆಂಕಪ್ಪಗೌಡ,
ರಾಜ್ಯ ಪ್ರಶಸ್ತಿ ವಿಜೇತ ಕೆ ಗೋಕುಲ್ದಾಸ್ ಅವರು ಈ ಸಂದರ್ಭದಲ್ಲಿ ಮಾತನಾಡಿ ಶುಭ ಹಾರೈಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಮುಸ್ತಫಾ ಅವರು ಸುಳ್ಯದ ಪ್ರತಿಯೊಬ್ಬರ ಸಹಾಯ ಸಹಕಾರ,ಅದೇ ರೀತಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಸಚಿವರಾದ ಬೈರತಿ ಸುರೇಶ್, ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಹಾಗೂ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಕಾರ್ಯದರ್ಶಿ ರವರು,ಜಿ ಕೃಷ್ಣಪ್ಪ ಈಗೆ ಇನ್ನೂ ಅನೇಕ ಮುಖಂಡರುಗಳ, ಸಹಕಾರದಿಂದ ಸುಡಾ ಅಧಿಕಾರವನ್ನು ಸುಳ್ಯಕ್ಕೆ ತರಲು

ಯಶಸ್ವಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು, ಜನ ಪ್ರತಿನಿಧಿಗಳ ಸಲಹೆ, ಸೂಚನೆಗಳನ್ನು ಪಡೆದು ಸುಳ್ಳದ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸಲಿದ್ದೇನೆ ಎಂದು ಹೇಳಿದರು. ಪ್ರಪ್ರಥಮವಾಗಿ ಬಹು ವರ್ಷಗಳ ಬೇಡಿಕೆಯಲ್ಲಿರುವ ಬಡವರ ಆಶ್ರಯ ಯೋಜನೆ ಬಗ್ಗೆ ಮಾಹಿತಿ ಪಡೆದು ನಿರಾಶ್ರಿತರಿಗೆ ಮನೆ ವ್ಯವಸ್ಥೆಯನ್ನು ಮಾಡುವ ಕೆಲಸ ಮಾಡಬೇಕಾಗಿದೆ. ಅಲ್ಲದೆ ಟೌನ್ ಹಾಲ್ ಸಭಾಂಗಣ ಅಭಿವೃದ್ಧಿ, ಒಳಚರಂಡಿಯ ವ್ಯವಸ್ಥೆಗಳು, ಪೌರಕಾರ್ಮಿಕರಿಗೆ ನಿವೇಶನ ಈಗೆ ಇರುವ ಬಹು ಮುಖ್ಯ ಸಮಸ್ಯೆಗಳಿಗೆ ಮೊದಲ ಆದ್ಯತೆಯಲ್ಲಿ ಕೆಲಸ ಕಾರ್ಯಗಳನ್ನು ಮಾಡಬೇಕಾಗಿದೆ. ಇದಕ್ಕಾಗಿ ಎಲ್ಲರ ಸಹಕಾರ ಬೇಕಾಗಿದೆ ಎಂದರು.ಮುಖಂಡ ಶಶಿಧರ ಎಂ ಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಮಾರಂಭದಲ್ಲಿ ನಗರ ಪಂಚಾಯತ್ ಸದಸ್ಯರುಗಳು,ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು, ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರುಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ಯಾರೆಂಟಿ ಅನುಷ್ಠಾನದ ಜಿಲ್ಲಾ ಸಮಿತಿ ಅಧ್ಯಕ್ಷ ಭರತ್ಂಡೋಡಿ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ,ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್ ಗಂಗಾಧರ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್, ಕರ್ನಾಟಕ ಸರಕಾರ ಕೆಪೆಕ್ ಮಾಜಿ ನಿರ್ದೇಶಕ ಪಿ ಎ ಮಹಮ್ಮದ್, ಕಾಂಗ್ರೆಸ್ ಪಕ್ಷದ ಮುಖಂಡ ರಾಧಾಕೃಷ್ಣ ಬೊಳ್ಳೂರು, ಜಿ.ಕೆ.ಹಮೀದ್ ಮೊದಲಾದವರು ಉಪಸ್ಥಿತರಿದ್ದರು.