ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ವಾರ್ಷಿಕ ಮಹಾಸಭೆ ಆ. 23 ರಂದು ವಿಷ್ಣು ವೈಭವ ಹೋಟೆಲ್ ನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ವಿಶ್ವನಾಥ್ ನಡುತೋಟ ವಹಿಸಿದ್ದರು.ಸಭೆಯಲ್ಲಿ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಮಂಡಿಸಲಾಯಿತು.ಬಳಿಕ 2025–26ನೇ ಸಾಲಿನ
ನೂತನ ಸಮಿತಿ ರಚಿಸಲಾಯಿತು.ಅಧ್ಯಕ್ಷರಾಗಿ ರತ್ನಾಕರ ಸುಬ್ರಹ್ಮಣ್ಯ, ಕಾರ್ಯದರ್ಶಿಯಾಗಿಶಿವರಾಮ ಕಜೆಮೂಲೆ, ಕೋಶಾಧಿಕಾರಿಯಾಗಿ ದಯಾನಂದ ಕಲ್ನಾರ್ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಪ್ರಕಾಶ್ ಸುಬ್ರಹ್ಮಣ್ಯ, ಜತೆ ಕಾರ್ಯದರ್ಶಿಯಾಗಿ ಸಂತೋಷ್ ಸುಬ್ರಹ್ಮಣ್ಯ ಆಯ್ಕೆಯಾದರು. ನಿರ್ದೇಶಕರಾಗಿ ಲೊಕೇಶ್ ಬಿ.ಎನ್, ಶಿವ ಭಟ್, ಗಣೇಶ್ ಅನಿಲ, ನಾಗೇಶ್, ಪ್ರಕಾಶ್ ಕೋಡಿಂಬಾಳ ಆಯ್ಕೆಯಾದರು.












