ಕೊಚ್ಚಿ:ಮಲಯಾಳಂ ಚಿತ್ರರಂಗದ ನಟಿ ಹಾಗೂ ನಿರೂಪಕಿ ಸುಬಿ ಸುರೇಶ್ (42) ನಿಧನರಾಗಿದ್ದಾರೆ.ಯಕೃತ್ ಸಂಬಂಧಿ ಕಾಯಿಲೆಯಿಂದ ಬಳಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಬಿ ಇಂದು ನಿಧನರಾದರು. ಹಾಸ್ಯ ತಾರೆಯಾಗಿ ಮಿಂಚಿದ್ದ ಅವರು ಕಿರು ತೆರೆಯಲ್ಲಿ ನಿರೂಪಕಿಯಾಗಿ
ಹೆಸರು ಮಾಡಿದ್ದರು. ಗೃಹನಾಥನ್, ತಕ್ಸರ ಲಹಳ, ಎಲ್ಸಮ್ಮ ಎನ್ನ ಆಂಕುಟ್ಟಿ, ಡ್ರಾಮ, ಪಂಜವರ್ಣ ತತ್ತ, ಕಿಲ್ಲಾಡಿ ರಾಮನ್, ಹ್ಯಾಪಿ ಹಸ್ಬಂಡ್ಸ್ ಸೇರಿ 20 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು. ಅವರು ನಿರೂಪಿಸಿದ್ದ ಟಿವಿ ಶೋಗಳು ಜನಪ್ರಿಯವಾಗಿತ್ತು. ಮಝವಿಲ್ ಮನೋರಮಾದ “ಮೇಡ್ ಫಾರ್ ಈಚ್ ಅದರ್” ಸೂರ್ಯ ಟಿವಿಯ “ಕುಟ್ಟಿ ಪಟ್ಟಾಳಂ” ನಲ್ಲಿ ನಿರೂಪಕಿಯಾಗಿದ್ದರು. ಹಲವಾರು ಟಿವಿ ಶೋ, ಹಾಗು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾಸ್ಯ ಕಾರ್ಯಕ್ರಮ ನಡೆಸಿದ್ದರು. ಡಾನ್ಸರ್ ಆಗಿದ್ದರು.