ನವದೆಹಲಿ:ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ‘ಆ್ಯಕ್ಸಿಯಂ–4’ ಕಾರ್ಯಕ್ರಮದ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಇತರ ಮೂವರು ಭೂಮಿಯತ್ತ ಸೋಮವಾರ ಪ್ರಯಾಣ ಆರಂಭಿಸಿದರು.ನಾಲ್ವರನ್ನು ಹೊತ್ತ ‘ಡ್ರ್ಯಾಗನ್’ ಬಾಹ್ಯಾಕಾಶ ಕೋಶವು
ಸೋಮವಾರ ಸಂಜೆ 4.45ಕ್ಕೆ (ಭಾರತೀಯ ಕಾಲಮಾನ) ಐಎಸ್ಎಸ್ನಿಂದ ಯಶಸ್ವಿಯಾಗಿ ಬೇರ್ಪಟ್ಟು (ಅನ್ಡಾಕ್) ಭೂಮಿಯತ್ತ ಪಯಣ ಬೆಳೆಸಿದೆ.
ಐಎಸ್ಎಸ್ನಿಂದ ಬೇರ್ಪಟ್ಟಿರುವ ‘ಡ್ರ್ಯಾಗನ್’ ಬಾಹ್ಯಾಕಾಶ ಕೋಶ 22 ಗಂಟೆಗಳ ಪ್ರಯಾಣದ ಬಳಿಕ, ಮಂಗಳವಾರ ಮಧ್ಯಾಹ್ನ 3.01ಕ್ಕೆ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಇಳಿಯಲಿದೆ.
‘ಆ್ಯಕ್ಸಿಯಂ–4’ ಕಾರ್ಯಕ್ರಮದ ಭಾಗವಾಗಿ ಶುಕ್ಲಾ, ಕಮಾಂಡರ್ ಪೆಗ್ಗಿ ವಿಟ್ಸನ್, ಹಂಗರಿಯ ಟಿಬೊರ್ ಕಾಪು ಹಾಗೂ ಪೋಲೆಂಡ್ನ ಸ್ಲಾವೋಸ್ ಯು.ವಿನ್ಸೀವ್ಸ್ಕಿ ಅವರು ಜೂನ್ 26ರಂದು ಐಎಸ್ಎಸ್ಗೆ ತೆರಳಿದ್ದರು.





