ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಬಜೆಟ್ ಮಂಡಿಸುತ್ತಿದ್ದಾರೆ. ತಾವು ಮಂಡಿಸಿರುವ ಎರಡನೇ ಬಜೆಟ್ನಲ್ಲಿ ಹಲವು ಜನಪರ ಯೋಜನೆಗಳನ್ನು ಘೋಷಿಸಿದ್ದಾರೆ. ಬಜೆಟ್ ಮುಖ್ಯಾಂಶಗಳು:
ರೈತರಿಗೆ ನೀಡಲಾಗುತ್ತಿದ್ದ 3 ಲಕ್ಷ ಬಡ್ಡಿ ರಹಿತ ಸಾಲ 5 ಲಕ್ಷ ರೂಪಾಯಿಗೆ ಹೆಚ್ಚಳ. ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಯೋಜನೆ., ತುರ್ತು ಸಂದರ್ಭದಲ್ಲಿ ರೈತರಿಗೆ ಬೀಜ, ಗೊಬ್ಬರ ವಿತರಣೆಗೆ
ಸಾಧ್ಯವಾಗುತ್ತದೆ.ಸಣ್ಣ, ಅತಿ ಸಣ್ಣ ತೈರತರಿಗಾಗಿ 180 ಕೋಟಿ ವೆಚ್ಚದಲ್ಲಿ ಜೀವನ್ ಜ್ಯೋತಿ ಕಿಸಾನ್ ಯೋಜನೆ ಘೋಷಣೆ.
ಗೃಹಿಣಿಯರಿಗೆ ತಿಂಗಳಿಗೆ 500 ಸಹಾಯ ಧನ.
ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್,
ಆರ್ಥಿಕವಾಗಿ ಹಿಂದುಳಿದವರಿಗೆ ವಸತಿ ಯೋಜನೆ,
ಮಹಿಳಾ ಸಂಘಟಿತ ಕಾರ್ಮಿಕರಿಗೂ ಉಚಿತ ಬಸ್ ಪಾಸ್,
ನೇಕಾರರು, ಮೀನುಗಾರರಿಗೂ ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ.ಪಿಎಂ ಕಿಸಾನ್ ಯೋಜನೆ ಅನ್ವಯ ಈಗಾಗಲೇ 14 ಲಕ್ಷಕ್ಕೂ ಹೆಚ್ಚು ರೈತರ ಖಾತೆಗೆ ಪರಿಹಾರದ ಹಣ ತಲುಪಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಪಿಎಂ ಕಿಸಾನ್ ಯೋಜನೆಯನ್ವಯ ಕೇಂದ್ರ 10,930 ಕೋಟಿ ರೂ. ನೀಡಿದೆ, ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಈಗಾಗಲೇ 962 ಕೋಟಿ ರೂ ವ್ಯಯಿಸಲಾಗಿದೆ. ಇನ್ನು ಬೆಳೆ ಹಾನಿ ಪರಿಶೀಲನೆ ನಡೆಸಿ ರೈತರ ಖಾತೆಗಳಿಗೆ ಪರಿಹಾರ ತಲುಪಿಸಲಾಗಿದೆ ಎಂದಿದ್ದಾರೆ.
ಪಿಎಂ ಕಿಸಾನ್ ಯೋಜನೆ ಅನ್ವಯ ಈಗಾಗಲೇ 14 ಲಕ್ಷಕ್ಕೂ ಹೆಚ್ಚು ರೈತರ ಖಾತೆಗೆ ಪರಿಹಾರದ ಹಣ ತಲುಪಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಪಿಎಂ ಕಿಸಾನ್ ಯೋಜನೆಯನ್ವಯ ಕೇಂದ್ರ 10,930 ಕೋಟಿ ರೂ. ನೀಡಿದೆ, ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಈಗಾಗಲೇ 962 ಕೋಟಿ ರೂ ವ್ಯಯಿಸಲಾಗಿದೆ. ಇನ್ನು ಬೆಳೆ ಹಾನಿ ಪರಿಶೀಲನೆ ನಡೆಸಿ ರೈತರ ಖಾತೆಗಳಿಗೆ ಪರಿಹಾರ ತಲುಪಿಸಲಾಗಿದೆ ಎಂದಿದ್ದಾರೆ.