ಸುಳ್ಯ:ಸುಳ್ಯ ಬೀರಮಂಗಲದಲ್ಲಿರುವ ಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಅಮೃತ ಮಹೋತ್ಸವ ಸಂಭ್ರಮ.ಜ.20ರಂದು ಶಾಲೆಯಲ್ಲಿ ಅಮೃತ ಮಹೋತ್ಸವ ಆಚರಣೆಗೆ ಚಾಲನೆ ದೊರೆತಿದೆ.ಬೆಳಿಗ್ಗೆ ದಿವ್ಯಬಲಿಪೂಜೆ ನಡೆಯಿತು.
75 ವಿದ್ಯಾರ್ಥಿಗಳಿಂದ ದೀಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಬಳಿಕ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ
ಕಾರ್ಯಕ್ರಮ ನಡೆಯಿತು.ಸೈಂಟ್ ಬ್ರಿಜಿಡ್ಸ್ ಶಾಲೆಯ ಜೊತೆ ಕಾರ್ಯದರ್ಶಿ ಹಾಗೂ ಸೈಂಟ್ ಬ್ರಿಜಿಡ್ಸ್ ಚರ್ಚ್ ಧರ್ಮಗುರುಗಳಾದ ರೆ.ಫಾದರ್ ಒಲ್ವಿನ್ ಎಡ್ವರ್ಡ್ ಡಿಕುನ್ಹಾ ಅಧ್ಯಕ್ಷತೆ ವಹಿಸಿ ಮಾತನಾಡಿ ‘ಸೈಂಟ್ ಬ್ರಿಜಿಡ್ಸ್ ಶಾಲೆ ಕಳೆದ 75 ವರ್ಷಗಳಲ್ಲಿ ಅತ್ಯುತ್ತಮ ವ್ಯಕ್ತಿತ್ವಗಳನ್ನು ರೂಪಿಸಿದೆ. ಹಳೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯೊಂದಿಗೆ ಇರುವ ಸಂಬಂಧವನ್ನು ಗಟ್ಟಿಯಾಗಿಸಬೇಕು ಎಂದು ಹೇಳಿದರು.ಸಂಪತ್ತು ಮುಖ್ಯವಲ್ಲ ಸಂಬಂಧವೇ ಮುಖ್ಯ ಎಂದು ಅವರು ಹೇಳಿದರು.

ಶಾಲೆಯ ಹಿರಿಯ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಹಿರಿಯ ವಿದ್ಯಾರ್ಥಿ ಎಸ್.ಎಂ. ಬಾಪೂಸಾಹೇಬ್ ಮಾತನಾಡಿ
‘ಹಿರಿಯರ ಕಲ್ಪನೆಯಂತೆ ಅಭಿಮಾನ ಪಡುವ ರೀತಿಯಲ್ಲಿ ಶಾಲೆ ಬೆಳೆದು ಅಮೃತಮಹೋತ್ಸವ ಕಾರ್ಯಕ್ರಮವನ್ನು ಆಚರಿಸುವುದು ಸಂತಸದ ವಿಷಯ ಎಂದರು.
ಹಿರಿಯ ವಿದ್ಯಾರ್ಥಿಗಳಾದ ನಗರ ಪಂಚಾಯತ್ ಮಾಜಿ ಸದಸ್ಯ ಡೇವಿಡ್ ಧೀರಾ ಕ್ರಾಸ್ತ,ಸುಳ್ಯ ಪದವಿ ಪೂರ್ವ ಕಾಲೇಜು ಪ್ರಾಧ್ಯಾಪಕಿ ಶಹನಾಝ್, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಯಶ್ವಿತ್ ಕಾಳಂಮನೆ, ಡಾ.ಸುನಿಧಿ ಎಸ್,ಚಲನಚಿತ್ರ ನಿರ್ದೇಶಕ ಮಯೂರ್ ಅಂಬೆಕಲ್ಲು ಅತಿಥಿಗಳಾಗಿ ಭಾಗವಹಿಸಿ ಅನಿಸಿಕೆ ವ್ಯಕ್ತಪಡಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಆ್ಯಂಟನಿ ಮೇರಿ, ಪೋಷಕ ಸಮಿತಿಯ ಉಪಾಧ್ಯಕ್ಷ ನವೀನ್ಚಂದ್ರ ಚಾತುಬಾಯಿ, ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ನವೀನ್ ಮಚಾದೋ ವೇದಿಕೆಯಲ್ಲಿ ಉಪಸ್ಥಿತರಿದ್ದರು.
1951ರಿಂದ 2025ರ ತನಕ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ವಿದ್ಯಾರ್ಥಿಗಳಿಂದ ಪ್ರಾರ್ಥನೆ ಹಾಗೂ ಸ್ವಾಗತ ನೃತ್ಯ ನಡೆಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಆ್ಯಂಟನಿ ಮೇರಿ ಸ್ವಾಗತಿಸಿ, ಸಹಶಿಕ್ಷಕಿ ಪಾವನ ಎನ್. ವಂದಿಸಿದರು. ಶಿಕ್ಷಕಿಯರಾದ ವಲ್ಸ ಹಾಗೂ ದೀಪಿಕಾ ಕಾರ್ಯಕ್ರಮ ನಿರೂಪಿಸಿದರು.












