ಸುಳ್ಯ:ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್ ) ಮತ್ತು ಎನ್ ಲೈಟ್ ಅಕಾಡೆಮಿ ಸುಳ್ಯ ಇದರ ಸಂಯುಕ್ತ ಆಶ್ರಯದಲ್ಲಿ ಸುಳ್ಯ ಅನ್ಸಾರಿಯ ಕನ್ವನ್ಷನ್ ಸೆಂಟರ್ನಲ್ಲಿ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ದತಾ ಶಿಬಿರ ಮತ್ತು ಗಣಿತ, ವಿಜ್ಞಾನ ವಿಷಯವಾರು ತರಬೇತಿ ಕಾರ್ಯಾಗಾರ ನಡೆಯಿತು. ಕಾರ್ಯಾಗಾರವನ್ನು ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ನಂದಕುಮಾರ್ ಉದ್ಘಾಟಿಸಿ ಮಾತನಾಡಿ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ತಿಳಿಯುವುದರಿಂದ ಸಮಾಜದಲ್ಲಿ ಉನ್ನತಿ ಸಾಧಿಸಲು
ಸಾಧ್ಯ ಎಂದು ಹೇಳಿದರು. .ಅಧ್ಯಕ್ಷತೆಯನ್ನು ಮೀಫ್ ಐಎಎಸ್, ಐಪಿಎಸ್ ತರಬೇತಿ ಕಾರ್ಯಾಗಾರದ ಸಂಚಾಲಕ ಅನ್ವರ್ ಹುಸೈನ್ ಗೂಡಿನಬಳಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ತಹಶೀಲ್ದಾರ್ ಮಂಜುನಾಥ್, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ,
ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧ್ಯಕ್ಷ ಹಾಜಿ ಕೆ. ಎಂ. ಅಬ್ದುಲ್ ಮಜೀದ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ, ಸುಳ್ಯ ನಗರ ಪಂಚಾಯತ್ ಸದಸ್ಯರಾದ ಕೆ. ಎಸ್. ಉಮ್ಮರ್, ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್ಸ್, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರ್,ಮುಸ್ಲಿಂ ಒಕ್ಕೂಟ ದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಏಲಿಮಲೆ, ಬೆಳ್ಳಾರೆ ಹಿದಾಯ ಸ್ಕೂಲ್ ನಿರ್ದೇಶಕ ಯು. ಪಿ. ಬಶೀರ್, ಉದ್ಯಮಿ ಹಮೀದ್ ಕುತ್ತಮೊಟ್ಟೆ, ಗ್ರೀನ್ ವ್ಯೂ ಸಂಚಾಲಕ ಎಸ್. ಎಂ. ಹಮೀದ್, ನಿಕಟ ಪೂರ್ವ ಸಂಚಾಲಕ ಮುಹಿಯದ್ದೀನ್ ಫ್ಯಾನ್ಸಿ, ಎಐಕೆಎಂಸಿಸಿ ಜಿಲ್ಹಾ ಖಜಾಂಚಿ ಇಬ್ರಾಹಿಂ ಕತ್ತರ್, ಸುಳ್ಯ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಅಬ್ದುಲ್ ಹಮೀದ್ ಜನತಾ, ಅನ್ಸಾರಿಯ ಉಪಾಧ್ಯಕ್ಷ ಎಸ್. ಪಿ. ಅಬೂಬಕ್ಕರ್,ಬಿಇಓ ಕಚೇರಿ ಸಂಯೋಜನಾಧಿಕಾರಿ ನಳಿನಿ ಕಿರ್ಲಾಯ, ಗಾಂಧಿನಗರ ಕೆ. ಪಿ. ಎಸ್ ಪ್ರಾoಶುಪಾಲರಾದ ಅಬ್ದುಲ್ ಸಮದ್ ಮೊದಲಾದವರು ಉಪಸ್ಥಿತರಿದ್ದರು
ಮೀಫ್ ಉಪಾಧ್ಯಕ್ಷ ಕೆ. ಎಂ. ಮುಸ್ತಫ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕ ಸಿರಾಜ್ ಫ್ಯಾನ್ಸಿ ವಂದಿಸಿದರು, ಆಸೀಫ್ ಕಾರ್ಯಕ್ರಮ ನಿರೂಪಿಸಿದರು
ಎನ್ ಲೈಟ್ ಅಕಾಡೆಮಿ ಪದಾಧಿಕಾರಿಗಳಾದ ಆಶೀಕ್ ಎಸ್. ಎ.
ಶಹೀದ್ ಪಾರೆ,ಮುಜೀಬ್ ಕೆ. ಬಿ.ಮಸೂದ್ ಮೊದಲಾದವರು ಕಾರ್ಯ ಕ್ರಮದಲ್ಲಿ ಸಹಕರಿಸಿದರು.
ಸುಳ್ಯ ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಂದ ಸುಮಾರು 320 ವಿದ್ಯಾರ್ಥಿಗಳು,20 ಶಿಕ್ಷಕರು ಭಾಗವಹಿಸದ್ದರು









