ಮಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಗಳು ಮಾ.31ರಂದು ಆರಂಭಗೊಂಡಿದೆ. ದ.ಕ.ಜಿಲ್ಲೆಯ 98 ಕೇಂದ್ರಗಳಲ್ಲಿ ನಡೆದ ಎಸ್ಎಸ್ಎಲ್ಸಿ ಪ್ರಥಮ ಭಾಷಾ ಪರೀಕ್ಷೆಯಲ್ಲಿ 244 ವಿದ್ಯಾರ್ಥಿಗಳು
ಗೈರಾಗಿದ್ದಾರೆ. ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ ಭಾಷಾ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ 28,506 ವಿದ್ಯಾರ್ಥಿಗಳ ಪೈಕಿ 28,262 ಮಂದಿ ಹಾಜರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ. ಸುಳ್ಯ ತಾಲೂಕಿನಲ್ಲಿ ಹೊಸದಾಗಿ ಪರೀಕ್ಷೆ ಬರೆಯುವ 1792 ವಿದ್ಯಾರ್ಥಿಗಳು ಮತ್ತು 21ಮರು ಪರೀಕ್ಷೆ ಬರೆಯುವವರು ಸೇರಿ 1813 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. 1785 ಫ್ರೆಶರ್ಸ್ ಮತ್ತು 16 ರಿಪೀಟರ್ಸ್ ಸೇರಿ 1801 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 7 ಪ್ರೆಶರ್ಸ್ ಮತ್ತು 5 ರಿಪೀಟರ್ಸ್ ಸೇರಿ 12 ಮಂದಿ ಗೈರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.