ಸುಳ್ಯ: 2024ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಮಾ.25ರಿಂದ ಆರಂಭಗೊಂಡಿದೆ. ಪರೀಕ್ಷೆಗಳು ಏ.6ರವರೆಗೆ ನಡೆಯಲಿದೆ. ಪ್ರಥಮ ದಿನ ಪ್ರಥಮ ಭಾಷಾ ಪರೀಕ್ಷೆ ನಡೆಯಿತು. ದ.ಕ.ಜಿಲ್ಲೆಯಲ್ಲಿ
ಪ್ರಥಮ ದಿನ 329 ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 28,866 ಮಂದಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 28537 ಮಂದಿ ಪರೀಕ್ಷೆಗೆ ಹಾಜರಾಗಿ 329 ಮಂದಿ ಗೈರಾಗಿದ್ದಾರೆ. ಸುಳ್ಯ ತಾಲೂಕಿನಲ್ಲಿ 6 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಸುಳ್ಯದಲ್ಲಿ ಪ್ರಥಮ ಪರೀಕ್ಷೆಗೆ 1895 ಮಂದಿ ನೋಂದಾಯಿಸಿಕೊಂಡಿದ್ದು 1834 ಮಂದಿ ಹಾಜರಾಗಿ 61 ಮಂದಿ ಗೈರು ಹಾಜರಾಗಿದ್ದಾರೆ.









