ಸುಳ್ಯ:ಸುಳ್ಯ ಹಳೆಗೇಟು ವಿದ್ಯಾನಗರದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ‘ಸಂಸ್ಕಾರ ವಾಹಿನಿ’ ಮಕ್ಕಳ ಬೇಸಿಗೆ ಶಿಬಿರ ಎ.11ರಂದು ಉದ್ಘಾಟನೆಗೊಂಡಿತು. ಕಲೆ-ಸಂಸ್ಕೃತಿ, ಸಂಸ್ಕಾರಗಳ ಸಂಗಮವಾಗುವ ಶಿಬಿರವನ್ನು ಸುಳ್ಯದ ದಂತ ವೈದ್ಯರಾದ ಡಾ. ವಿದ್ಯಾಶಾರದಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ
ಬದುಕಿಗೆ ಬೇಕಾದ ಶಿಕ್ಷಣವೇ ಸಂಸ್ಕಾರ. ಬಾಲ್ಯದಲ್ಲಿ ದೊರಕುವ ಸಂಸ್ಕಾರದ ಶಿಕ್ಷಣ

ಬಾಳಿನ ಕೊನೆ ತನಕ ಇದ್ದು ಜೀವನವನ್ನು ರೂಪಿಸುತ್ತದೆ ಎಂದು ಹೇಳಿದರು. ದಿಕ್ಸೂಚಿ ಉಪನ್ಯಾಸ ನೀಡಿದ ನಿವೃತ್ತ ಕನ್ನಡ ಉಪನ್ಯಾಸಕಿ ಕುಸುಮಾ ಯು.ಬಿ. ಮಾತನಾಡಿ ’14 ವರ್ಷದವರೆಗಿನ ಮಕ್ಕಳಿಗೆ ನೈತಿಕ ಶಿಕ್ಷಣವನ್ನು ನೀಡಬೇಕು. ಹಿರಿಯರು ಬಳುವಳಿಯಾಗಿ ಸಂಸ್ಕಾರವನ್ನು ನೀಡುವುದರ ಮೂಲಕ ಪರಂಪರೆಯು ಜನಾಂಗದಿಂದ ಜನಾಂಗಕ್ಕೆ ಮುಂದುವರಿಯಬೇಕು.ಈ ನಿಟ್ಟಿನಲ್ಲಿ ಹಿರಿಯರು ಕಾಳಜಿ ವಹಿಸಿ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ರೂಪಿಸಿದರೆ ದೇಶಕ್ಕೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದು ಹೇಳಿದರು.

ಸಂಸ್ಕಾರವಾಹಿನಿ ಶಿಬಿರದ ಸಂಚಾಲಕಿ ಪಾರ್ವತಿ ಮುಳ್ಯ ಅಧ್ಯಕ್ಷತೆ ವಹಿಸಿದ್ದರು. ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್, ಸುಳ್ಯ ತಾಲೂಕು ಬಿಎಂಎಸ್ ಸಂಯೋಜಿತ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಪ್ರಕಾಶ್ ಎಂ. ಉಪಸ್ಥಿತರಿದ್ದರು. ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ
ಸಂಚಾಲಕಿ ಶ್ರೀದೇವಿ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಮಿತಾ ಪ್ರವೀಣ್ ರಾವ್ ಸ್ವಾಗತಿಸಿದರು. ಸವಿತಾ ಪಾತಿಕಲ್ಲು ವಂದಿಸಿದರು. ಒಂದು ವಾರಗಳ ಕಾಲ ನಡೆಯುವ ಶಿಬಿರ ಎ.15ರಂದು ಸಮಾರೋಪಗೊಳ್ಳಲಿದೆ.
