ಸುಳ್ಯ:ಎಸ್ಎಸ್ಎಫ್ ಸುಳ್ಯ ಸೆಕ್ಟರ್ ವಾರ್ಷಿಕ ಮಹಾಸಭೆಯು ಮೇ 11 ರಂದು ಸುಳ್ಯ ಸುನ್ನಿ ಸೆಂಟರ್ ನಲ್ಲಿ ಸೆಕ್ಟರ್ ಅಧ್ಯಕ್ಷರಾದ ಬಶೀರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಏಣಾವರ ಸ್ವಾಗತಿಸಿ ವರದಿ ಮಂಡನೆ ಮಾಡಿದರು. ಕೋಶಾಧಿಕಾರಿ
ಉನೈಸ್ ಗೂನಡ್ಕ ಲೆಕ್ಕ ಪತ್ರ ವಾಚಿಸಿದರು, ರಿಯಾನ್ ಸಅದಿ ಬೆಳ್ಳಾರೆ ಸಭೆಯನ್ನು ಉದ್ಘಾಟಿಸಿದರು, ನೂತನ ಪ್ರಧಾನ ಕಾರ್ಯದರ್ಶಿ ಸಾದಿಕ್ ವಂದಿಸಿದರು.
ನೂತನ ಸಮಿತಿ ಅಧ್ಯಕ್ಷರಾಗಿ ಮಶೂದ್ ಹಿಮಮಿ ಸಖಾಫಿ,ಪ್ರಧಾನ ಕಾರ್ಯದರ್ಶಿಯಾಗಿ ಸ್ವಾದಿಕ್ ಪಿ ಜಿ, ಕೋಶಾಧಿಕಾರಿಯಾಗಿ ರುನೈಝ್ ಕೊಯನಾಡು, ಕಾರ್ಯದರ್ಶಿಗಳಾಗಿ ಸಾಜಿದ್ ಹಿಮಮಿ ಪೆರಾಜೆ (ದಅವಾ), ಸಲ್ಮಾನ್ ಪಾರಿಸ್ (ಕ್ಯಾಂಪಸ್), ಇರ್ಫಾನ್ ಏನಾವರ (QD), ಉನೈಸ್ ಗೂನಡ್ಕ (CC) ಅನ್ವರ್ ಏನಾವರ (ರೈಂಬೊ), ಅಬಿದ್ ( ಮೀಡಿಯಾ), ಅಜೀಜ್ ಮಾಸ್ಟರ್ (ವಿಸ್ಡಮ್) ಬಶೀರ್ (ಪಬ್ಲಿಕೇಶನ್), ಸಮಿತಿ ಸದಸ್ಯರಾಗಿ ಆರಿಫ್ ಬುಶ್ರ, ಆಶಿಕ್ ಕಲ್ಲುಗುಂಡಿ, ಅಲಿ ಕಲ್ಲುಗುಂಡಿ ಆಯ್ಕೆಯಾದರು.
ವೀಕ್ಷಕರಾಗಿ ಆಗಮಿಸಿದ ಸುಳ್ಯ ಡಿವಿಷನ್ ನಾಯಕರಾದ ರಿಯಾನ್ ಸಅದಿ ಬೆಳ್ಳಾರೆ,ಹಾಗೂ ಕಬೀರ್ ಜಟ್ಟಿಪಳ, ರವರು ಸಭೆಯನ್ನು ಸುಸೂತ್ರವಾಗಿ ನಡೆಸಿಕೊಟ್ಟರು