ಸುಳ್ಯ:ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್(ಎಸ್ಎಸ್ಎಫ್) ರಾಷ್ಟ್ರೀಯ ಸಾಹಿತ್ಯೋತ್ಸವದ ಜೂನಿಯರ್ ವಿಭಾಗದ ಉರ್ದು ಅತ್ ಸ್ಪರ್ಧೆಯಲ್ಲಿ ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸದ ವಿದ್ಯಾರ್ಥಿಗಳಾದ
ಅಹ್ಮದ್ ಅಬ್ರಾರ್, ಮುಹಮ್ಮದ್ ಫರಾಝ್ ಮತ್ತು ಮುಹಮ್ಮದ್ ಅಂಫಾಲ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ನ.14,15,16 ರಂದು ಗುಲ್ಬರ್ಗಾದಲ್ಲಿ ರಾಷ್ಟ್ರೀಯ ಸಾಹಿತ್ಯೋತ್ಸವ ಜರಗಿತು. ರಾಷ್ಟ್ರದ 26 ರಾಜ್ಯಗಳಿಂದ ಸ್ಪರ್ಧಾರ್ಥಿಗಳು ಭಾಗವಹಿಸಿದರು. ಗಾಂಧಿನಗರ ವಿದ್ಯಾರ್ಥಿಗಳ ಸಾಧನೆಗೆ ಮುಹಿಯದ್ದೀನ್ ಜುಮಾ ಮಸ್ಜಿದ್ ಆಡಳಿತ ಸಮಿತಿ, ಮದ್ರಸ ಉಸ್ತುವಾರಿಗಳು ಸ್ಟಾಫ್ ಕೌನ್ಸಿಲ್ ಮತ್ತು ಯುನಿಟ್ ಸಮಿತಿ ಅಭಿನಂದನೆಗಳು ಸಲ್ಲಿಸಿದ್ದಾರೆ.





