ಸುಳ್ಯ:ಎಸ್ಎಸ್ಎಫ್ ಡಿ.ಕೆ.ಈಸ್ಟ್ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ ಬೆಳ್ಳಾರೆ ಸಮೀಪದ ತಂಬಿನಮಕ್ಕಿ ದಾರುಲ್ ಹುದಾ ಕ್ಯಾಂಪಸ್ನಲ್ಲಿ ಸೆ.20ರಂದು ಸಂಜೆ ಆರಂಭಗೊಂಡಿತು. ದಾರುಲ್ ಹುದಾ ವ್ಯವಸ್ಥಾಪಕರಾದ ಖಲೀಲ್ ಹಿಮಮಿ ಸಖಾಫಿ ಉದ್ಘಾಟಿಸಿದರು.ಎಸ್ಎಸ್ಎಫ್ ಜಿಲ್ಲಾಧ್ಯಕ್ಷ ಶಫೀಕ್ ಸಅದಿ ಈಶ್ವರಮಂಗಲ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ
ಪತ್ರಕರ್ತ ಗಂಗಾಧರ ಕಲ್ಲಪಳ್ಳಿ, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಸಾಹಿತ್ಯೋತ್ಸವದ ಸ್ವಾಗತ ಸಮಿತಿಯ ಚೆಯರ್ಮೆನ್ ಲತೀಫ್ ಹರ್ಲಡ್ಕ, ಸ್ಥಳೀಯ ನಿರ್ವಹಣಾ ಸಮಿತಿಯ ಚೆಯರ್ಮೆನ್ ಹಮೀದ್ ಆಲ್ಫಾ, ಎಸ್ಎಸ್ಎಫ್

ರಾಜ್ಯ ಕಾರ್ಯದರ್ಶಿ ಮುರ್ಷಾದ್ ಸಖಾಫಿ,ಮುಸ್ತಫ ಪೂಕೋಯ ತಂಙಳ್, ಹಸನ್ ಸಖಾಫಿ, ತೌಸೀಫ್ ಸಅದಿ ಅರೇಕಳ,ಅಯ್ಯೂಬ್ ತಂಬಿನಮಕ್ಕಿ, ಸಂಶುದ್ದೀನ್ ಝಂ ಝಂ, ಹಮೀದ್ ಸುಣ್ಣಮೂಲೆ, ಹನೀಫ್ ಸಲಾಲ, ಹಸೈನಾರ್ ಗುತ್ತಿಗಾರು, ಸಿದ್ದಿಕ್ ಕಟ್ಟೆಕ್ಕಾರ್, ನಿಯಾಝ್ ಎಲಿಮಲೆ, ಅಲಿ ಸಅದಿ, ಸಿದ್ದಿಕ್ ಹಿಮಮಿ ಸಖಾಫಿ, ಖಲಂದರ್ ಹಿಮಮಿ ಸಖಾಫಿ, ತೌಸೀಫ್ ಪಳ್ಳಿಮಜಲು ಉಪಸ್ಥಿತರಿದ್ದರು. ಸ್ವಬಾಹ್ ಹಿಮಮಿ ಸಖಾಫಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸ್ವಾದಿಕ್ ಮಾಸ್ಟರ್ ಕಲ್ಲುಗುಂಡಿ ವಂದಿಸಿದರು.
ಎರಡು ದಿನಗಳ ಕಾಲ ನಡೆಯುವ ಸಾಹಿತ್ಯೋತ್ಸವದಲ್ಲಿ ಸಾಹಿತ್ಯ, ಕಲೆಗಳ 150 ಸ್ಪರ್ಧೆಗಳು ನಡೆಯಲಿದೆ.ಯೂನಿಟ್, ಕ್ಲಸ್ಟರ್, ಡಿವಿಷನ್ ಮಟ್ಟದಲ್ಲಿ ವಿಜೇತರಾದವರು ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದಾರೆ. 6 ಡಿವಿಷನ್ಗಳಿಂದ ಒಂದು ಸಾವಿರಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸುತ್ತಿದ್ದಾರೆ.





