ಸುಳ್ಯ: ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ಗೆ ಐವತ್ತು ವಯಸ್ಸು ತುಂಬಿರುವ ಹಿನ್ನಲೆಯಲ್ಲಿ. ರಾಷ್ಟ್ರದಾದ್ಯಂತ ಗೋಲ್ಡನ್ ಫಿಫ್ಟಿ ಯೋಗ್ಯ ವೃತ್ತ. 2023 ನವಂಬರ್ 24, 25, 26 ತಾರೀಖುಗಳಲ್ಲಿ ಮುಂಬೈಯಲ್ಲಿ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನ ನಡೆಯಲಿದೆ. ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ನ ಅಧೀನದಲ್ಲಿ ಕರ್ನಾಟಕ ವಿದ್ಯಾರ್ಥಿ ಸಮ್ಮೇಳನ ಸೆಪ್ಟಂಬರ್ 10ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಅದರ ಪ್ರಚಾರ, ಯೋಜನೆ ಸಮರ್ಪಣೆ
ಗುರಿಯಾಗಿಟ್ಟು ರಾಜ್ಯ ಎಸ್ಸೆಸ್ಸೆಫ್ ನ 100ಕ್ಕೂ ಮಿಕ್ಕ ಡಿವಿಷನ್ ಕೇಂದ್ರಗಳಲ್ಲಿ ಗ್ರಾಮ ಸವಾರಿ ನಡೆಯುತ್ತಿದೆ.
ಎಸ್ಎಸ್ಎಫ್ ಸುಳ್ಯ ಡಿವಿಷನ್ ಸಮಿತಿಯ ಗ್ರಾಮ ಸವಾರಿ ಡಿವಿಷನ್ ವ್ಯಾಪ್ತಿಯ 21 ಯುನಿಟ್ ಕೇಂದ್ರಗಳಲ್ಲಿ ಜರಗಿತು. ಮಾಪಳಡ್ಕ ಮಖಾಂ ಝಿಯಾರತ್ ನೊಂದಿಗೆ ಗ್ರಾಮ ಸವಾರಿಗೆ ಚಾಲನೆ ನೀಡಲಾಯಿತು. ಸಯ್ಯಿದ್ ತ್ವಾಹಿರ್ ಸಅದಿ ಬಾಅಲವಿ ದುಆಗೈದು ಎಸ್ಸಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷ ಸ್ವಬಾಹ್ ಹಿಮಮಿ ಸಖಾಫಿ ಗೆ ಎಸ್ಸೆಸ್ಸೆಫ್ ದ್ವಜ ಹಸ್ತಾಂತರಿಸಿದರು. ಅಜ್ಜಾವರ ಸೆಕ್ಟರ್ ವ್ಯಾಪ್ತಿಯ
ಮಂಡಕ್ಕೋಲು, ಇರುವಂಬಳ್ಳ, ಮೇನಾಲ, ಕುಂಭಕ್ಕೋಡ್ ಹಾಗೂ ಪೈಂಬಚ್ಚಾಲ್ ಯೂನಿಟ್ ಕೇಂದ್ರಗಳಲ್ಲಿ ಸುಳ್ಯ ಸೆಕ್ಟರ್ ವ್ಯಾಪ್ತಿಯ ಕಲ್ಲುಗುಂಡಿ, ಗೂನಡ್ಕ, ಏಣಾವರ, ಮೊಗರ್ಪಣೆ ಹಾಗೂ ಗಾಂಧಿನಗರ ಯುನಿಟ್ ಕೇಂದ್ರಗಳಲ್ಲಿ, ಜಾಲ್ಸೂರು ಸೆಕ್ಟರ್ ವ್ಯಾಪ್ತಿಯ ಸುಣ್ಣಮೂಲೆ, ಜಾಲ್ಸೂರು, ಗುತ್ತಿಗಾರು, ಎಲಿಮಲೆ ಯುನಿಟ್ ಕೇಂದ್ರಗಳಲ್ಲಿ, ಬೆಳ್ಳಾರೆ ಸೆಕ್ಟರ್ ವ್ಯಾಪ್ತಿಯ ಪಳ್ಳಿಮಜಲ್, ಐವರ್ನಾಡು, ಇಂದ್ರಾಜೆ, ಪೆರುವಾಜೆ, ಮಾಲಂಗೇರಿ, ತಂಬಿನಮಕ್ಕಿ ಯುನಿಟ್ಗಳಲ್ಲಿ ಗ್ರಾಮ ಭೇಟಿಯ ಬಳಿಕ ಬೆಳ್ಳಾರೆ ಯುನಿಟ್ ಕೇಂದ್ರದಲ್ಲಿ ಗ್ರಾಮ ಸವಾರಿಯ ಸಮಾರೋಪ ಸಂಗಮ ಜರಗಿತು. ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷ ಸ್ವಬಾಹ್ ಹಿಮಮಿ ಸಖಾಫಿ, ಪ್ರಧಾನ ಕಾರ್ಯದರ್ಶಿ ನಿಯಾಝ್ ಎಲಿಮಲೆ ಚರ್ಚಾ ವೇದಿಕೆಯ ನೇತತ್ವ ವಹಿಸಿದ್ದರು. ಫಿನಾನ್ಸ್ ಕಾರ್ಯದರ್ಶಿ ಸಿದ್ದೀಖ್ ಹಿಮಮಿ ಸಖಾಫಿ, ಕಾರ್ಯಕಾರಿ ಸಮಿತಿ ಸದಸ್ಯ ಮುಖ್ತಾರ್ ಹಿಮಮಿ ಸಖಾಫಿ ವಿವಿಧ ಕೇಂದ್ರಗಳಲ್ಲಿ ಸವಾರಿ ಸಂದೇಶ ಭಾಷಣಗೈದರು.
ಸುನ್ನಿ ಜಂಇಯ್ಯತುಲ್ ಉಲಮಾ ಬೆಳ್ಳಾರೆ ಝೋನ್ ಅಧ್ಯಕ್ಷ ಹಸನ್ ಸಖಾಫಿ ಬೆಳ್ಳಾರೆ, ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ಝೋನ್ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಇಂದ್ರಾಜೆ, ಫಿನಾನ್ಸ್ ಕಾರ್ಯದರ್ಶಿ ಹಮೀದ್ ಸುಣ್ಣಮೂಲೆ, ಸದಸ್ಯ ಅಬ್ದುಲ್ ಖಾದರ್ ಪಾಣಾಜೆ, ಎಸ್.ವೈ.ಎಸ್ ಸುಳ್ಯ ಝೋನ್ ಫಿನಾನ್ಸ್ ಕಾರ್ಯದರ್ಶಿ ಶಂಸುದ್ದೀನ್ ಬೆಳ್ಳಾರೆ, ದಾರುಲ್ ಹುದಾ ತಂಬಿನಮಕ್ಕಿ ಮ್ಯಾನೇಜರ್ ಖಲೀಲ್ ಹಿಮಮಿ ಸಖಾಫಿ, ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಮಾಜಿ ಅಧ್ಯಕ್ಷ ಮುಹಮ್ಮದ್ ಮುಸ್ಲಿಯಾರ್ ಮಂಡಕ್ಕೋಲ್, ಕೆ.ಎಂ.ಜೆ ಎಲಿಮಲೆ ಅಧ್ಯಕ್ಷ ಸೂಫಿ ಮುಸ್ಲಿಯಾರ್, ಎಸ್.ವೈ.ಎಸ್ ಎಲಿಮಲೆ ಅಧ್ಯಕ್ಷ ಮುಹಮ್ಮದ್ ಸಖಾಫಿ, ಪೈಂಬಚ್ಚಾಲ್ ಜುಮಾ ಮಸ್ಜಿದ್ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಪೈಂಬಚ್ಚಾಲ್ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಡ್ವಕೇಟ್ ಮೂಸ, ಸುಳ್ಯ ಸರ್ಕಲ್ ಮುಸ್ಲಿಂ ಜಮಾಅತ್ ಅಧ್ಯಕ್ಷ ಉಮರ್ ಹಾಜಿ ಪಿ.ಎ, ಗೂನಡ್ಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಮುಹಮ್ಮದ್ ಕುಂಞಿ ಗೂನಡ್ಕ, ಎಸ್ಸೆಸ್ಸೆಫ್ ದ.ಕ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಶಮೀರ್ ಮೊಗರ್ಪಣೆ, ಎಸ್.ವೈ.ಎಸ್ ರಾಜ್ಯ ಸಮಿತಿ ಸದಸ್ಯ ಸಿದ್ದೀಖ್ ಕಟ್ಟೆಕ್ಕಾರ್, ಕೆ.ಎಂ.ಜೆ ಇಂದ್ರಾಜೆ ಅಧ್ಯಕ್ಷ ವೈ.ಕೆ ಸುಲೈಮಾನ್ ಹಾಜಿ, ಕೆ.ಸಿ.ಎಫ್ ಸದಸ್ಯ ರಝಾಖ್ ಹುಮೈದಿ, ಇಂದ್ರಾಜೆ ಜುಮಾ ಮಸ್ಜಿದ್ ಪ್ರ. ಕಾರ್ಯದರ್ಶಿ ಫಾರೂಖ್ ಸಾಹೆಬ್, ಜಾಲ್ಸೂರು ಎಸ್.ವೈ.ಎಸ್ ಅಧ್ಯಕ್ಷ ನೌಫಲ್ ಸಅದಿ, ಸದಸ್ಯ ರಫೀಖ್, ಡಿವಿಷನ್ ಸಮಿತಿಯ ಮಾಜಿ ನಾಯಕರಾದ ಫೈಝಲ್ ಝುಹ್ರಿ, ಸಿರಾಜ್
ಹಿಮಮಿ, ಜುನೈದ್ ಸಖಾಫಿ, ಕಬೀರ್ ಜಟ್ಟಿಪಳ್ಳ, ನೌಶಾದ್ ಕೆರೆಮೂಲೆ ಮುಂತಾದವರು ವಿವಿಧ ಕೇಂದ್ರಗಳಲ್ಲಿ ಮುಖ್ಯ ಅತಿಥಿಗಳಾಗಿದ್ದರು.
ಸಮಾರೋಪ ಸಂಗಮ ಬೆಳ್ಳಾರೆ ಸೆಕ್ಟರ್ ನೌಶಾದ್ ಅಹ್ಸನಿ ಬೆಳ್ಳಾರೆ ಸ್ವಾಗತಿಸಿ ಸುಳ್ಯ ಸೆಕ್ಟರ್ ಅಧ್ಯಕ್ಷ ಬಶೀರ್ ಕಲ್ಲುಮುಟ್ಲು ವಂದಿಸಿದರು.