ಸುಳ್ಯ: ದೀಪಗಳ ಹಬ್ಬ ದೀಪಾವಳಿಯ ಸಂಭ್ರಮವನ್ನು ಹೆಚ್ಚಿಸಲು ವೈವಿಧ್ಯಮಯ ಪಟಾಕಿಗಳೊಂದಿಗೆ ಸುಳ್ಯ ಸೂಂತೋಡು ಕಾಂಪ್ಲೆಕ್ಸ್ ಮುಂಭಾಗದಲ್ಲಿ ಮತ್ತು ಪಾತಿಕಲ್ಲು ಕಾಂಪ್ಲೆಕ್ಸ್ ಮುಂಭಾಗದಲ್ಲಿ ಶ್ರೀ ವಿಷ್ಣು ಪಟಾಕಿ ಅಂಗಡಿ ತೆರೆದು ಕೊಂಡಿದೆ. ಸುನಿಲ್ ಕೇರ್ಪಳ ಹಾಗು ದಿನೇಶ್ ವರ್ಷ ಅವರ ನೇತೃತ್ವದಲ್ಲಿ ಶ್ರೀ ವಿಷ್ಣು ಪಟಾಕಿ ಅಂಗಡಿ ತೆರೆದಿದ್ದು ವೈವಿಧ್ಯಮಯ

ಪಟಾಕಿಗಳ ಸಂಗ್ರಹ ಇದೆ. ಪ್ರತಿ 1000 ರೂ.ಮೇಲಿನ ಪಟಾಕಿ ಖರೀದಿಗೆ ಒಂದು ಲಕ್ಕಿ ಕೂಪನ್ ನೀಡಲಾಗುತ್ತಿದೆ. ಕೂಪನ್ ಡ್ರಾ ಮಾಡಿ ವಿಜೇತರಿಗೆ 1 ಗ್ರಾಂ ಚಿನ್ನದ ನಾಣ್ಯ ನೀಡಲಾಗುತ್ತದೆ. ಮಾಲೆ ಪಟಾಕಿಗಳು, ಶಾರ್ಟ್ಸ್‌ಗಳು, ಗಿಪ್ಟ್ ಬಾಕ್ಸ್‌ಗಳು ಲಭ್ಯವಿದೆ. ನೆಲಚಕ್ರ, ದುರ್ಸು, ಸ್ಪ್ರಾಕ್ಲಿಂಗ್ ಕಡ್ಡಿಗಳು ಸೇರಿ ವೈವಿಧ್ಯಮಯ ಪಟಾಕಿಗಳು ಬಂದಿದೆ. ಎಲ್ಲಾ ಕಂಪೆನಿಯ ಗುಣಮಟ್ಟದ ಪಟಾಕಿಗಳು ಅತಿ ಕಡಿಮೆ ದರದಲ್ಲಿ ಮಾರಾಟ

ಮಾಡಲಾಗುತಿದೆ ಎಂದು ಸುನಿಲ್ ಕೇರ್ಪಳ ತಿಳಿಸಿದ್ದಾರೆ. ಅಂಗಡಿ ಪೂರ್ತಿ ವೈವಿಧ್ಯಮಯ ಪಟಾಕಿಗಳ ಸಂಗ್ರಹದೊಂದಿಗೆ ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ. ಸಚಿವ ಎಸ್.ಅಂಗಾರ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ಮತ್ತಿತರರು ಆಗಮಿಸಿ ಶುಭ ಹಾರೈಸಿದ್ದಾರೆ.
