ಹರಾರೆ: ಶ್ರೀಲಂಕಾ ಮುಂದಿನ ಅಕ್ಟೋಬರ್ – ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದಿದೆ. ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಪಂದ್ಯದಲ್ಲಿ ಶ್ರೀಲಂಕಾ 9 ವಿಕೆಟ್ಗೆ
ಜಿಂಬಾಬ್ವೆ ತಂಡವನ್ನು ಸೋಲಿಸಿದೆ. ಜಿಂಬಾಬ್ವೆ 32.2 ಓವರ್ಗಳಲ್ಲಿ 165 ರನ್ಗೆ ಆಲ್ ಔಟ್ ಆಯಿತು. ಶ್ರೀಲಂಕಾ 33.1 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಪಾತುಂ ನಿಸ್ಸಾಂಕ ಶತಕ(101) ಶತಕ ಬಾರಿಸಿದರು.9ನೇ ತಂಡವಾಗಿ ಶ್ರೀಲಂಕಾ ಅರ್ಹತೆ ಪಡೆದುಕೊಂಡಿದೆ.
ಇನ್ನೊಂದು ಪಂದ್ಯ ಉಳಿದಿರುವ ಜಿಂಬಾಬ್ವೆಗೆ 10 ನೇ ತಂಡವಾಗಿ ಅರ್ಹತೆ ಪಡೆಯುವ ಅವಕಾಶ ಇದೆ. ಎರಡು ಬಾರಿಯ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಅರ್ಹತೆ ಪಟೆಯಲಾಗದೆ ಏಕದಿನ ವಿಶ್ವಕಪ್ನಿಂದ ಹೊರಬಿದ್ದಿದೆ.