ಹರಾರೆ: ಅಕ್ಟೋಬರ್- ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾ ಕೂಟಕ್ಕೆ ಶ್ರೀಲಂಕಾ ಹಾಗೂ ನೆದರ್ಲೆಂಡ್ಸ್ ಅರ್ಹತೆ ಪಡೆದುಕೊಂಡಿದೆ.ವಿಶ್ವಕಪ್ ಅರ್ಹತಾ ಪಂದ್ಯಾವಳಿಯ ಚಾಂಪಿಯನ್ ಆಗಿ ಹೊರಹೊಮ್ಮಿರುವ ಶ್ರೀಲಂಕಾ ತಂಡ ಹಾಗೂ ನೆದರ್ಲೆಂಡ್ಸ್ ಪ್ರಧಾನ ಸುತ್ತಿಗೇರಿದೆ. ರವಿವಾರದ ನಡೆದ ಅರ್ಹತಾ
ಸುತ್ತಿನ ಫೈನಲ್ನಲ್ಲಿ ಶ್ರೀಲಂಕಾ ನೆದರ್ಲೆಂಡ್ಸ್ ತಂಡವನ್ನು 128 ರನ್ನುಗಳಿಂದ ಸೋಲಿಸಿ ಚಾಂಪಿಯನ್ ಆಗುವ ಮೂಲಕ ಅರ್ಹತೆ ಗಿಟ್ಟಿಸಿಕೊಂಡಿತು. ಈ ಮಧ್ಯೆ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ತಂಡಗಳು ಅರ್ಹತೆ ಪಡೆಯುವಲ್ಲಿ ವಿಫಲವಾದರು.
ಹರಾರೆಯಲ್ಲಿ ನಡೆದ ಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ 47.5 ಓವರ್ಗಳಲ್ಲಿ 233ಕ್ಕೆ ಆಲೌಟ್ ಆಯಿತು. ನೆದರ್ಲೆಂಡ್ಸ್ 23.3 ಓವರ್ಗಳಲ್ಲಿ 105ಕ್ಕೆ ಕುಸಿಯಿತು.
ಈ ಎರಡೂ ತಂಡಗಳು ಕ್ರಮವಾಗಿ 9ನೇ ಹಾಗೂ 10ನೇ ತಂಡಗಳಾಗಿ ವಿಶ್ವಕಪ್ ಪ್ರಧಾನ ಸುತ್ತಿನಲ್ಲಿ ಆಡಲಿವೆ. ಇದರೊಂದಿಗೆ ವಿಶ್ವಕಪ್ ವೇಳಾಪಟ್ಟಿ ಪರಿಪೂರ್ಣಗೊಂಡಿದೆ.