ಮುಂಬೈ: ವಿಶ್ವಕಪ್ ಕ್ರಿಕೆಟ್ನಲ್ಲಿ ಭಾರತದ ವೇಗಿಗಳ ಬೆಂಕಿ ಚೆಂಡಿಗೆ ನಲುಗಿರುವ ಶ್ರೀಲಂಕಾದ 4 ವಿಕೆಟ್ ಪತನಗೊಂಡಿದೆ. ಸ್ಕೋರ್ ಬೋರ್ಡ್ನಲ್ಲಿ ಕೇವಲ 3 ರನ್ ಸೇರಿಸುವಷ್ಟರಲ್ಲಿ 4 ಪ್ರಮುಖ ಬ್ಯಾಟರ್ಗಳು ಪೆವಿಲಿಯನ್ ಸೇರಿದ್ದಾರೆ.ಮಾರಕ ಬೌಲಿಂಗ್ ದಾಳಿ ಸಂಘಟಿಸಿರುವ
ಜಸ್ಪೀತ್ ಬುಮ್ರಾ ಹಾಗೂ ಮಹಮ್ಮದ್ ಸಿರಾಜ್ ಶ್ರೀಲಂಕಾಕ್ಕೆ ಭಾರೀ ಹೊಡೆತ ನೀಡಿದೆ. ಮಹಮ್ಮದ್ ಸಿರಾಜ್ 3 ವಿಕೆಟ್ ಹಾಗೂ ಬುಮ್ರಾ 1 ವಿಕೆಟ್ ಪಡೆದರು. ಪಾತುಮ್ ನಿಸ್ಸಾಂಕ, ಕರುಣರತ್ನೆ, ಕುಶಾಲ್ ಮೆಂಡಿಸ್, ಸದೀರ ಸಮರ ವಿಕ್ರಮೆ ಓಟ್ ಆಗಿದ್ದಾರೆ. 358 ರನ್ ಗುರಿ ಬೆನ್ನಟ್ಟಿರುವ ಶ್ರೀಲಂಕಾ ಇತ್ತೀಚಿನ ವರದಿ ಬಂದಾಗ 6 ಓವರ್ಗಳಲ್ಲಿ 4 ವಿಕೆಟ್ 9 ರನ್ ಗಳಿಸಿ ಸಂಕಷ್ಟದಲ್ಲಿದೆ.
ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿತ್ತು.









