ಪಲೇಕೆಲೆ: ಏಷ್ಯಾ ಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ತಂಡವು 5 ವಿಕೆಟ್ಗಳಿಂದ ಬಾಂಗ್ಲಾದೇಶ ಎದುರು ಗೆದ್ದಿತು. ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಮಾಡಿ ಮಥೀಷ (32ಕ್ಕೆ4) ದಾಳಿಗೆ ಕುಸಿದು 42.4 ಓವರ್ಗಳಲ್ಲಿ 164 ರನ್ ಗಳಿಸಿ ಆಲೌಟ್ ಆಯಿತು.
ನಜ್ಮುಲ್ ಹುಸೇನ್ ಶಾಂತೊ (89; 122ಎ, 4X7) ಏಕಾಂಗಿ ಹೋರಾಟ
ನಡೆಸಿದರು. ಸಾಧಾರಣ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟರ್ ಸದೀರ ಸಮರವಿಕ್ರಂ (54; 77ಎ, 4X6) ಮತ್ತು ಚರಿತ ಅಸಲಂಕಾ (ಅಜೇಯ 62; 92ಎ, 4X6, 6X1) ಅವರ ತಾಳ್ಮೆಯ ಬ್ಯಾಟಿಂಗ್ ಆಸರೆಯಾಯಿತು. ಇವರಿಬ್ಬರೂ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 78 ರನ್ ಸೇರಿಸಿದರು.
ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ: 42.4 ಓವರ್ಗಳಲ್ಲಿ 164 (ನಜ್ಮುಲ್ ಹುಸೇನ್ ಶಾಂತೊ 89, ತೌಹಿದ್ ಹೃದಯ್ 20, ಮೊಹಮ್ಮದ್ ನೈಮ್ 16, ಮಹೀಷ ತೀಕ್ಷಣ 19ಕ್ಕೆ2, ಮತೀಷಾ ಪಥಿರಾಣ 32ಕ್ಕೆ4) ಶ್ರೀಲಂಕಾ: 39 ಓವರ್ಗಳಲ್ಲಿ 5 ವಿಕೆಟ್ಗಳಿಗೆ 165 (ಸದೀರಾ ಸಮರವಿಕ್ರಂ 54, ಚರಿತ ಅಸಲಂಕಾ ಔಟಾಗದೆ 62, ಶಕೀಬ್ ಅಲ್ ಹಸನ್ 29ಕ್ಕೆ2)