ಸುಳ್ಯ: ಆದರ್ಶ ವ್ಯಕ್ತಿತ್ವ ದಿಂದ ಬಾಳಿದ ಶ್ರೀಕೃಷ್ಣ ಭಟ್ ಅವರು ದೇಶದ ಆಸ್ತಿಯಾಗಿದ್ದರು. ಆಧ್ಯಾಪಕ ವೃತ್ತಿಯ ಮೂಲಕ ಸಾವಿರಾರು ವಿದ್ಯಾವಂತರನ್ನು ನಾಡಿಗೆ ಸಮರ್ಪಿಸಿದ ಸಾಧನೆ ಅವರದು ಎಂದು ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ ಹೇಳಿದರು. ಅಗಲಿದ ಪ್ರೊ.ಶ್ರೀಕೃಷ್ಣ ಭಟ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು
ನುಡಿ ನಮನ ಸಲ್ಲಿಸಿದರು.ನಗರ ಪಂಚಾಯತ್ ಮಾಜಿ ಸದಸ್ಯ ಕೆ ಎಂ ಮುಸ್ತಫ, ಹಿರಿಯ ವೈದ್ಯರಾದ ಡಾ. ಶಂಕರ ಭಟ್,ಪಿ ವಿ ಕೆ ರ್ ವೈದ್ಯರ್,ಉದ್ಯಮಿಗಳಾದ ಮಹಮ್ಮದ್ ಬಾರ್ಪಣೆ, ಹಾಜಿ ಅಹ್ಮದ್ ಕೆಟಿಎಸ್, ನಗರಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕ್ಕಾರ್ಸ್, ಉದ್ಯಮಿ ಶಾಫಿ ಕುತ್ತಾಮೊಟ್ಟೆ, ಶಾರದಾಂಬ ಸೇವಾಸಮಿತಿ ಯ ರಾಜು ಪಂಡಿತ್ ಮತ್ತಿತರರು ನುಡಿ ನಮನ ಸಲ್ಲಿಸಿದರು. ಶ್ರೀಕೃಷ್ಣ ಭಟ್ ಅವರ ಕುಟುಂಬದ ಸದಸ್ಯರಾದ ಶ್ರೀಮತಿ ರಾಜರಾಜೇಶ್ವರಿ, ಪುತ್ರರಾದ ಕಾರ್ತಿಕ್, ಕೌಶಿಕ್, ವಿಷ್ಣುಭಟ್ ಮೊದಲಾದವರು ಉಪಸ್ಥಿತರಿದ್ದರು