ಸುಳ್ಯ:ಸ್ಪೀಕರ್ ಯು.ಟಿ. ಖಾದರ್, ಮಾಜಿ ಸಚಿವ ರಮನಾಥ ರೈ ಅವರು ಖಾಸಗೀ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುಳ್ಯಕ್ಕೆ ಭೇಟಿ ನೀಡಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಅವರ ಪುತ್ರ ಕರಣ್ ಹಾಗೂ ಅನು ಅವರ ವಿವಾಹ ಕಾರ್ಯಕ್ರಮದ ಅತಿಥಿ ಸತ್ಕಾರ
ಕಾರ್ಯಕ್ರಮದಲ್ಲಿ ಭಾಗವಹಿಸಲು
ಸ್ಪೀಕರ್ ಯು.ಟಿ ಖಾದರ್, ಹಾಗೂ ಮಾಜಿ ಸಚಿವರಾದ ರಮನಾಥ ರೈ ಆಗಮಿಸಿದ್ದರು. ಧನಂಜಯ ಅಡ್ಪಂಗಾಯರವರ ಸುಳ್ಯದ ಮನೆಗೆ ಭೇಟಿ ನೀಡಿ ನೂತನ ವಧು ವರರಿಗೆ ಶುಭ ಹಾರೈಸಿದರು. ಧನಂಜಯ ಅಡ್ಪಂಗಾಯ ಅವರು ಸ್ವಾಗತಿಸಿದರು. ಪ್ರಮುಖರಾದ ಸದಾನಂದ ಮಾವಜಿ, ಎಸ್.ಸಂಶುದ್ದೀನ್, ಶಾಫಿ ಕುತ್ತಮೊಟ್ಟೆ, ದಿನೇಶ್ ಅಂಬೆಕಲ್ಲು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.