ಅಹಮದಾಬಾದ್: ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ನಾಯಕ ಏಡನ್ ಮರ್ಕರಂ ಅಜೇಯ 86 ರನ್ ಬಾರಿಸಿ ದಕ್ಷಿಣ ಆಫ್ರಿಕಾ ತಂಡ, ನ್ಯೂಜಿಲೆಂಡ್ ವಿರುದ್ಧ ಸುಲಭ ಗೆಲುವು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನೂ 17 ಎಸೆತಗಳಿರುವಂತೆ ಏಳು ವಿಕೆಟ್ಗಳಿಂದ ಗೆದ್ದ ಹರಿಣಗಳ ಪಡೆ ‘ಡಿ’ ಗುಂಪಿನಲ್ಲಿ
ಅಗ್ರಸ್ಥಾನ ಪಡೆಯುವುದು ಬಹುತೇಕ ಖಚಿತಗೊಂಡಿತು.ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 7 ವಿಕೆಟ್ಗೆ 175 ರನ್ ಗಳಿಸಿತು. ದಕ್ಷಿಣ ಆಫ್ರಿಕಾ ತಂಡ 17.1 ಓವರುಗಳಲ್ಲಿ 3 ವಿಕೆಟ್ಗೆ 178 ರನ್ ಬಾರಿಸಿ ಸತತ ಮೂರನೇ ಗೆಲುವನ್ನು ದಾಖಲಿಸಿತು.ಮರ್ಕರಂ ಕೇವಲ 44 ಎಸೆತಗಳಲ್ಲಿ ಎಂಟು ಬೌಂಡರಿ, ನಾಲ್ಕು ಸಿಕ್ಸರ್ಗಳನ್ನು ಹೊಡೆದಟ್ಟಿದರು. ಇದಕ್ಕೂ ಮೊದಲು ಮಾರ್ಕ್ ಚಾಪ್ಮನ್ (48, 4×6, 6×2) ಮತ್ತು ಡೇರಿಲ್ ಮಿಚೆಲ್ (32, 24 ಎಸೆತ) ನಡುವಣ 74 ರನ್ಗಳ ಜೊತೆಯಾಟ ನ್ಯೂಝಿಲೆಂಡ್ ತಂಡಕ್ಕೆ ಚೇತರಿಕೆ ನೀಡಿತು
ಸ್ಕೋರುಗಳು:
ನ್ಯೂಜಿಲೆಂಡ್: 20 ಓವರುಗಳಲ್ಲಿ 7 ವಿಕೆಟ್ಗೆ 175 (ಫಿನ್ ಅಲೆನ್ 31, ಚಾಪ್ಮನ್ 48, ಡೇರಿಲ್ ಮಿಚೆಲ್ 32, ಜೇಮ್ಸ್ ನೀಶಮ್ ಔಟಾಗದೇ 23; ಮಾರ್ಕೊ ಯಾನ್ಸೆನ್ 40ಕ್ಕೆ4);
ದಕ್ಷಿಣ ಆಫ್ರಿಕಾ: 17.1 ಓವರುಗಳಲ್ಲಿ 3 ವಿಕೆಟ್ಗೆ 178 (ಏಡನ್ ಮರ್ಕರಂ ಔಟಾಗದೇ 86, ಡೇವಿಡ್ ಮಿಲ್ಲರ್ ಔಟಾಗದೇ 24).
ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಟಿ20 ವಿಶ್ವಕಪ್ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ಸ್ಕಾಂಟ್ಲೆಂಡ್ ವಿರುದ್ಧ ಐದು ವಿಕೆಟ್ಗಳ ಸುಲಭ ಜಯ ಸಾಧಿಸಿತು.ಸ್ಕಾಟ್ಲೆಂಡ್ ಅನ್ನು 19.2 ಓವರ್ಗಳಲ್ಲಿ 152 ರನ್ಗಳಿಗೆ ಕಟ್ಟಿಹಾಕಿತು. ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡವು ಬ್ಯಾಂಟನ್ (ಔಟಾಗದೇ 63;41ಎ) ಅವರ ಬ್ಯಾಟಿಂಗ್ ನೆರವಿನಿಂದ ಇನ್ನೂ 10 ಎಸೆತಗಳು ಬಾಕಿ ಇರುವಂತೆ 5 ವಿಕೆಟ್ಗೆ 155 ರನ್ ಗಳಿಸಿ ಸಂಭ್ರಮಿಸಿತು. ಇದರೊಂದಿಗೆ ಪ್ಲೇ ಆಫ್ ಕನಸನ್ನೂ ಜೀವಂತವಾಗಿರಿಸಿಕೊಂಡಿತು.
ಸಂಕ್ಷಿಪ್ತ ಸ್ಕೋರು:
ಸ್ಕಾಂಟ್ಲೆಂಡ್: 19.4 ಓವರ್ಗಳಲ್ಲಿ 152 (ಮೈಕೆಲ್ ಜೋನ್ಸ್ 33, ರಿಚಿ ಬ್ಯಾರಿಂಗ್ಟನ್ 49; ಅದಿಲ್ ರಶೀದ್ 36ಕ್ಕೆ 3, ಜೋಫ್ರಾ ಆರ್ಚರ್ 24ಕ್ಕೆ 2, ಲಿಯಾಮ್ ದಾಸನ್ 34ಕ್ಕೆ 2)
ಇಂಗ್ಲೆಂಡ್: 18.2 ಓವರ್ಗಳಲ್ಲಿ 155 (ಟಾಮ್ ಬ್ಯಾಂಟನ್ ಔಟಾಗದೇ 63, ಜೇಕಬ್ ಬೇಥೆಲ್ 32).




