ಅಹಮದಾಬಾದ್:ಎರಡು ಸೂಪರ್ ಓವರ್ಗಳ ರೋಚಕ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವು ಅಫ್ಗಾನಿಸ್ತಾನವನ್ನು ಮಣಿಸಿದೆ.
ರಿಯಾನ್ ರಿಕೆಲ್ಟನ್ (61; 28ಎ) ಮತ್ತು ಕ್ವಿಂಟನ್ ಡಿ ಕಾಕ್ (59; 41ಎ) ಅವರ ಶತಕದ ಜೊತೆಯಾಟದ ಬಲದಿಂದ ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 187 ರನ್ ಗಳಿಸಿತು. ಅದಕ್ಕೆ ತಿರುಗೇಟು ನೀಡಿದ
ಅಫ್ಗಾನಿಸ್ತಾನ ರೆಹಮಾನುಲ್ಲಾ ಗುರ್ಬಾಜ್ (84; 42ಎ) ಅವರು ಏಕಾಂಗಿ ಹೋರಾಟದಿಂದ ನಿಗದಿಯ ಓವರ್ಗಳಲ್ಲಿ ಪಂದ್ಯ ಟೈ ಆಯಿತು. ಆದರೆ ಇಲ್ಲಿಂದ ಹಣಾಹಣಿಯು ಮತ್ತಷ್ಟು ರೋಚಕವಾಯಿತು. ಎರಡು ಸೂಪರ್ ಓವರ್ಗಳ ನಂತರ ಫಲಿತಾಂಶ ನಿರ್ಧಾರವಾಯಿತು.
ಮೊದಲ ಸೂಪರ್ ಓವರ್ನಲ್ಲಿ ಲುಂಗಿ ಎನ್ಗಿಡಿ ಬೌಲಿಂಗ್ ಮಾಡಿದರು. ಅವರ ಓವರ್ನಲ್ಲಿ ಬ್ಯಾಟರ್ ಅಝ್ಮತ್ವುಲ್ಲಾ ಒಮರ್ಝೈ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಹೊಡೆದರು. ಒಟ್ಟು 17 ರನ್ ಗಳಿಸಿದರು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾದ ಟ್ರಿಸ್ಟನ್ ಸ್ಟಬ್ಸ್ ಅವರು ಫಜಲ್ ಹಕ್ ಫಾರೂಕಿ ಅವರು ಹಾಕಿದ ಓವರ್ನಲ್ಲಿ ಎರಡು ಸಿಕ್ಸರ್ ಹೊಡೆದರು. ಅದರಲ್ಲೊಂದು ಓವರ್ನ ಕೊನೆಯ ಎಸೆತದಲ್ಲಿ ದಾಖಲಾಯಿತು. ಓವರ್ ಸಮಬಲಗೊಂಡಿತು.
ಎರಡನೇ ಸೂಪರ್ ಓವರ್ನಲ್ಲಿ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಮತ್ತು ಟ್ರಿಸ್ಟನ್ ಸ್ಟಬ್ಸ್ ಅವರು ಒಟ್ಟು ಮೂರು ಸಿಕ್ಸರ್ ಸಹಿತ 23 ರನ್ ಸೇರಿಸಿದರು. ಈ ಸವಾಲಿಗೂ ಅಫ್ಗನ್ ಪಡೆ ಬೆಚ್ಚಲಿಲ್ಲ. ರೆಹಮಾನುಲ್ಲಾ ಗುರ್ಬಾಜ್ ಅವರು ಅನುಭವಿ ಸ್ಪಿನ್ನರ್ ಕೇಶವ್ ಮಹಾರಾಜ್ ಅವರ ಓವರ್ನಲ್ಲಿ ಸತತ 3 ಸಿಕ್ಸರ್ ಬಾರಿಸಿದರು. ಆದರೆ ಆರಂಭಿಕ ಬ್ಯಾಟರ್ ಮೊಹಮ್ಮದ್ ನಬಿ ಮೊದಲೆರಡು ಎಸೆತ ಎದುರಿಸಿ ಒಂದೂ ರನ್ ಗಳಿಸದೇ ಔಟಾದರು. ನಂತರದ ನಾಲ್ಕು ಎಸೆತಗಳಲ್ಲಿ ಗುರ್ಬಾಜ್ ಅಬ್ಬರಿಸಿದರು. ಆದರೆ ಕೊನೆಯ ಎಸೆತದಲ್ಲಿ ಅವರು ಔಟಾಗುವುದರೊಂದಿಗೆ ದಕ್ಷಿಣ ಆಫ್ರಿಕಾ ಜಯದ ಸಂಭ್ರಮ ಆಚರಿಸಿತು.
ಸಂಕ್ಷಿಪ್ತ ಸ್ಕೋರು:
ದಕ್ಷಿಣ ಆಫ್ರಿಕಾ: 20 ಓವರ್ಗಳಲ್ಲಿ 6ಕ್ಕೆ187 (ಕ್ವಿಂಟನ್ ಡಿ ಕಾಕ್ 59, ರಿಯಾನ್ ರಿಕೆಲ್ಟನ್ 61, ಡಿವಾಲ್ಡ್ ಬ್ರೆವಿಸ್ 23, ಡೇವಿಡ್ ಮಿಲ್ಲರ್ ಔಟಾಗದೇ 20, ಮಾರ್ಕೊ ಯಾನ್ಸೆನ್ 16, ಅಜ್ಮತ್ವುಲ್ಲಾ ಒಮರ್ಝೈ 41ಕ್ಕೆ3, ರಶೀದ್ ಖಾನ್ 28ಕ್ಕೆ2)
ಅಫ್ಗಾನಿಸ್ತಾನ: 19.4 ಓವರ್ಗಳಲ್ಲಿ 187 (ರೆಹಮಾನುಲ್ಲಾ ಗುರ್ಬಾಜ್ 84, ಇಬ್ರಾಹಿಂ ಜದ್ರಾನ್ 12, ಅಜ್ಮತ್ವುಲ್ಲಾ ಒಮರ್ಝೈ 22, ರಶೀದ್ ಖಾನ್ 20, ನೂರ್ ಅಹಮದ್ ಔಟಾಗದೇ 15, ಲುಂಗಿ ಗಿಡಿ 26ಕ್ಕೆ3)
ಸೂಪರ್ ಓವರ್ 1:
ಅಫ್ಗಾನಿಸ್ತಾನ: 1 ಓವರ್ನಲ್ಲಿ ವಿಕೆಟ್ ನಷ್ಟವಿಲ್ಲದೇ 17 (ಅಜ್ಮತ್ವುಲ್ಲಾ ಒಮರ್ಝೈ 16, ರೆಹಮಾನುಲ್ಲಾ ಗುರ್ಬಾಜ್ ಔಟಾಗದೇ 1)
ದಕ್ಷಿಣ ಆಫ್ರಿಕಾ: 1 ಓವರ್ನಲ್ಲಿ 1 ವಿಕೆಟ್ಗೆ 17 (ಟ್ರಿಸ್ಟನ್ ಸ್ಟಬ್ಸ್ ಔಟಾಗದೇ 10, ಡಿವಾಲ್ಡ್ ಬ್ರೆವಿಸ್ 6, ಫಜಲ್ಹಕ್ ಫರೂಖಿ 17ಕ್ಕೆ1)
ಸೂಫರ್ ಓವರ್ 2:
ದಕ್ಷಿಣ ಆಫ್ರಿಕಾ: 1 ಓವರ್ನಲ್ಲಿ ವಿಕೆಟ್ ನಷ್ಟವಿಲ್ಲದೇ 23 (ಟ್ರಿಸ್ಟನ್ ಸ್ಟಬ್ಸ್ ಅಜೇಯ 7, ಡೇವಿಡ್ ಮಿಲ್ಲರ್ ಅಜೇಯ 16)
ಅಫ್ಗಾನಿಸ್ತಾನ: 1 ಓವರ್ನಲ್ಲಿ 2 ವಿಕೆಟ್ಗಳಿಗೆ 19 (ರೆಹಮಾನುಲ್ಲಾ ಗುರ್ಬಾಜ್ 18, ಕೇಶವ್ ಮಹಾರಾಜ್ 19ಕ್ಕೆ2)







