ಸುಳ್ಯ: ಸುಳ್ಯ ನಗರ ವ್ಯಾಪ್ತಿಯಲ್ಲಿ 2013 ಕ್ಕಿಂತ ಮುಂಚಿತವಾಗಿ ಕನ್ವರ್ಷನ್ ಆದ ಭೂಮಿ, ನಿರ್ಮಾಣ ಅಭಿವೃದ್ಧಿಗೆ ಸೂಡ ನಿಯಮಗಳಿಂದ ವಿನಾಯಿತಿ ನೀಡಬೇಕು ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೆ ಸುಳ್ಯನಗರ ಪಂಚಾಯತ್ ಮಾಜಿ ಅಧ್ಯಕ್ಷ ಸಂಶುದ್ದೀನ್, ಮಾಜಿ ಸದಸ್ಯ ಕೆ. ಎಂ. ಮುಸ್ತಫ ಮನವಿ ಸಲ್ಲಿಸಿದ್ದಾರೆ. 2013ರ ನಂತರ ನಗರ
ಯೋಜನಾ ಪ್ರಾಧಿಕಾರದ ಅನುಮೋದನೆಯ ಕಾನೂನು ಅನ್ವಯಿಸಲಾಗುತ್ತಿದ್ದು, ಅದಕ್ಕೆ ಮುಂಚಿತವಾಗಿ ಭೂ ಪರಿವರ್ತನೆ ಗೊಂಡ ನಿವೇಶನಗಳು ಆ ಸಮಯದಲ್ಲಿ ಇರುವ ಕಾನೂನಿನoತೆ ವ್ಯವಹರಣೆ ಗೊಂಡಿರುತ್ತದೆ, ಸದ್ರಿ ಭೂಮಿಯಲ್ಲಿ ಕಟ್ಟಡ ನಿರ್ಮಾಣ,ದುರಸ್ತಿ, ವಿಸ್ತರಣೆ, ಫಾರಂ 3 ಖಾತೆ, ಪರಭಾರೆ ಮೊದಲಾದ ಕಾರ್ಯಗಳಿಗೆ ಸೂಡ ಅನುಮೋದನೆ ಪಡೆಯುವುದು ಅಸಾಧ್ಯವಾಗಿರುತ್ತದೆ.
ಆದ್ದರಿಂದ 2013 ಕಟ್ ಆಫ್ ದಿನಾಂಕ ನಿಗದಿಪಡಿಸಿ, ಭೂಮಿ ದಾಖಲೆ ಗಳನ್ನು, ಖಾತೆಗಳನ್ನು ನೀಡಲು 2013 ಕ್ಕಿಂತ ಮುಂಚಿತವಾಗಿ ಕನ್ವರ್ಷನ್ ಆದ ಭೂಮಿ, ನಿರ್ಮಾಣ ಗಳ ಅಭಿವೃದ್ಧಿಗೆ ಸೂಡ ನಿಯಮಗಳಿಂದ ವಿನಾಯಿತಿ ನೀಡಿ, ನಗರ ಪಂಚಾಯತ್ ನಲ್ಲಿಯೇ ಈ ಬಗ್ಗೆ ಖಾತೆ ಮತ್ತು ಕಟ್ಟಡ ಪರವಾನಿಗೆ, ಅಭಿವೃದ್ಧಿ ಗೆ ಅನುಮತಿ ನೀಡಲು ಸೂಕ್ತ ಕ್ರಮ ಕೈಗೊಂಡು ಆದೇಶ ನೀಡಬೇಕಾಗಿ ಮನವಿಯಲ್ಲಿ ವಿನಂತಿಸಲಾಗಿದೆ