ಜೈಪುರ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ರಾಜಸ್ಥಾನ ವಿಧಾನಸಭೆಯಿಂದ ರಾಜ್ಯಸಭೆ ಸದಸ್ಯರಾಗಿ ಇಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗುಜರಾತ್ನಿಂದ ಜೆಪಿ ನಡ್ಡಾ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.ರಾಜಸ್ಥಾನದಿಂದ
ಸೋನಿಯಾ ಗಾಂಧಿ ಹಾಗೂ
ಭಾರತೀಯ ಜನತಾ ಪಕ್ಷದ ಚುನ್ನಿಲಾಲ್ ಗರಸಿಯಾ ಮತ್ತು ಮದನ್ ರಾಥೋಡ್ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ವಿಧಾನಸಭೆ ಅಧಿಕಾರಿಗಳು ಪ್ರಕಟಿಸಿದ್ದಾರೆ. ಮಂಗಳವಾರ ನಾಮಪತ್ರ ಹಿಂತೆಗೆಯುವ ಕೊನೆಯ ದಿನಾಂಕವಾಗಿತ್ತು. ಬೇರೆ ಯಾವುದೇ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿಲ್ಲದ ಕಾರಣ ಈ ಮೂವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.ಜೆಪಿ ನಡ್ಡಾ ಹಾಲಿ ಹಾಗೂ ತಮ್ಮದೇ ತವರು ರಾಜ್ಯವಾದ ಹಿಮಾಚಲಪ್ರದೇಶದ ರಾಜ್ಯಸಭೆ ಸದಸ್ಯರಾಗಿದ್ದಾರೆ. ಆದರೆ ಈ ಬಾರಿ ಅವರ ಮರು ಆಯ್ಕೆಗೆ ಅಗತ್ಯವಾದ ಪ್ರಮಾಣದ ಮತಗಳು ಹಿಮಾಚಲ ಪ್ರದೇಶದಲ್ಲಿ ಇಲ್ಲದ ಕಾರಣ ಅವರಿಗೆ ಗುಜರಾತ್ನ ಟಿಕೆಟ್ ನೀಡಲಾಗಿದೆ.