ಸೋಣಂಗೇರಿ:ಸೋಣಂಗೇರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಶ್ರೀಕೃಷ್ಣ ಭಜನಾ ಮಂದಿರಕ್ಕೆ ಧಾರ್ಮಿಕ ಮುಖಂಡರು ಹಾಗೂ ಸಮಾಜಸೇವಕರಾದ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ ನೀಡಿ ನಿರ್ಮಾಣ ಕಾರ್ಯಗಳ ವೀಕ್ಷಣೆ ನಡೆಸಿದರು.ಮಂದಿರದ ಆಡಳಿತ ಸಮಿತಿಯ ಸದಸ್ಯರೊಂದಿಗೆ ನೂತನ ಮಂದಿರ ನಿರ್ಮಾಣ ಮತ್ತು ಮುಂದಿನ ಅಭಿವೃದ್ಧಿ ಕುರಿತಾಗಿ ಸಮಾಲೋಚನೆ ನಡೆಸಿದ ಅವರು, ಮಂದಿರದ
ನಿರ್ಮಾಣ ಕೆಲಸ ಪೂರ್ಣಗೊಳ್ಳಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು.
ಸಂದರ್ಭದಲ್ಲಿ ಸುಪ್ರೀತ್ ಮೋಂಟಡ್ಕ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಪ್ರಮೋದ್ ದಿಡುಪೆ, ಭಜನಾ ಮಂದಿರ ಸಮಿತಿಯ ಅಧ್ಯಕ್ಷ ಗಿರಿಧರ ಗೌಡ ನಾಯರ್ಹಿತ್ಲು , ಕರುಣಾಕರ ಉಜಿರೆ, ಧನುಷ್ ಕೊಕ್ಕಡ, ಭರತ್ ಕುಪ್ಪೆಟ್ಟಿ, ಕಾರ್ಯದರ್ಶಿ ನಿರಂಜನ ಮಿತ್ತಮಜಲು, ಕೋಶಾಧಿಕಾರಿ ಲೀಲಾವತಿ ನಡುಮನೆ, ಗೌರವ ಸಲಹೆಗಾರರಾದ ಎಸ್.ಎನ್. ಗೋಪಾಲಕೃಷ್ಣ, ಚಿದಾನಂದ ಗೋಪಾಲಕಜೆ, ಸದಾನಂದ ಹುಲಿಮನೆ, ಎಸ್.ಕೆ.ಭಾಸ್ಕರ ಗೌಡ ಕುಂಟಿಕಾನ, ಎಸ್.ಎನ್. ಲೋಕೇಶ್ ನಡುಮನೆ, ಸುಂದರ ರೈ ಶಾಂತಿನಗರ, ಎಸ್.ಎನ್. ರವೀಂದ್ರ ನಡುಮನೆ ಮತ್ತು ಸದಸ್ಯರಾದ ಮೋಹಿನಿ ನಡುಮನೆ, ಶುಭಾ ಕಾಡುತೋಟ, ಪ್ರಿಯಾಂಕ ಎಸ್.ಎನ್. ಸೋಣಂಗೇರಿ, ಪುರುಷೋತ್ತಮ ಆಚಾರ್ಯ ಕೆದಿಕ್ಕಾನ, ಹಿಮಾಂಶು ಬಿ.ಸಿ. ಸೋಣಂಗೇರಿ, ಮಂಜುನಾಥ ಮಡ್ತಿಲ ಉಪಸ್ಥಿತರಿದ್ದರು.













