ಸೋಣಂಗೇರಿ:ಜಾಲ್ಸೂರು ಗ್ರಾಮದ ಸೋಣಂಗೇರಿಯ ಶ್ರೀ ಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಮಂದಿರ ವೀಕ್ಷಣೆಗೆ ಮತ್ತು ಆಶೀರ್ವಚನ ನೀಡಲು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿಗಳು ಮಾ.7ರಂದು ಅಪರಾಹ್ನ 3.00ಗಂಟೆಗೆ ಆಗಮಿಸಲಿದ್ದಾರೆ.ಇದೇ ಸಂದರ್ಭದಲ್ಲಿ

ಶಶಿಧರ ಕೋಟೆ
ಖ್ಯಾತ ಗಾಯಕ ಶಶಿಧರ ಕೋಟೆ ಅವರು ರಚಿಸಿ ಹಾಡಿದ ಧ್ವನಿ ಮುದ್ರಿತ ಭಕ್ತಿ ಗೀತೆ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಮಾಜಿ ಸಚಿವರಾದ ಎಸ್. ಅಂಗಾರ, ಪ್ರಮುಖರಾದ ವೆಂಕಟ್ ವಳಲಂಬೆ, ಚಂದ್ರ ಕೋಲ್ಚಾರ್, ಅಡ್ಡಂತಡ್ಕ ದೇರಣ್ಣ ಗೌಡ, ಶ್ರೀಕಾಂತ್ ಗೋಲ್ವಳ್ಕರ್, ಲಕ್ಷ್ಮೀ ನಾರಾಯಣರವರು ಉಪಸ್ಥಿತರಿರುವರು ಎಂದು ಮಂದಿರದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









