ಸೋಣಂಗೇರಿ:ಜಾಲ್ಸೂರು ಗ್ರಾಮದ ಸೋಣಂಗೇರಿಯ ಶ್ರೀಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಈ ಹಿನ್ನಲೆಯಲ್ಲಿ ಖ್ಯಾತ ಗಾಯಕ ಶಶಿಧರ ಕೋಟೆ ಅವರು ರಚಿಸಿ ಹಾಡಿದ ಧ್ವನಿ ಮುದ್ರಿತ ಭಕ್ತಿ ಗೀತೆ ಬಿಡುಗಡೆ ಕಾರ್ಯಕ್ರಮ ಮಾ.7ರಂದು ನಡೆಯಿತು.ಮಾಜಿ ಸಚಿವರಾದ ಎಸ್. ಅಂಗಾರ ಅವರು ಭಕ್ತಿ ಗೀತೆ ಬಿಡುಗಡೆ ಮಾಡಿ ಮಾತನಾಡಿ ‘ಮಂದಿರ ಪೂರ್ತಿ ಯಾಗುವ ತನಕ
ಎಲ್ಲರೂ ಒಗ್ಗಟಿನಿಂದ ಕೆಲಸ ಮಾಡಬೇಕು, ನಾವು ಮಾಡುವಂತ ಕೆಲಸದ ಮೇಲೆ ಬದ್ಧತೆ ಇರಬೇಕು. ಪ್ರೀತಿ, ವಿಶ್ವಾಸ, ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಸೋಣಂಗೇರಿ ಶ್ರೀಕೃಷ್ಣ ಭಜನಾ ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷ ಗಿರಿಧರ ಗೌಡ ನಾಯರ್ಹಿತ್ಲು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಲ ಬೆಂಗಳೂರು ಇದರ ನಿರ್ದೇಶಕರಾದ ಚಂದ್ರ ಕೋಲ್ಚಾರ್, ವಿಶ್ವ ಹಿಂದೂ ಭಜರಂಗದಳ ಸುಳ್ಯ ಪ್ರಖಂಡದ ಅಧ್ಯಕ್ಷ ಶ್ರೀಕಾಂತ್ ಗೋಲ್ವಳ್ಕರ್, ಉದ್ಯಮಿ ಲಕ್ಷ್ಮೀನಾರಾಯಣ ಅತಿಥಿಗಳಾಗಿದ್ದರು.

ಸುಪ್ರೀತ್ ಮೋಂಟಡ್ಕ, ಲೀಲಾವತಿ ಕರುಣಾಕರ ನಡುಮನೆ ಉಪಸ್ಥಿತರಿದ್ದರು.ಸೋಣಂಗೇರಿ ಶ್ರೀಕೃಷ್ಣ ಭಜನಾ ಮಂದಿರದ ಆಡಳಿತ ಸಮಿತಿಯ ಸಂಚಾಲಕ ಸತ್ಯಶಾಂತಿ ತ್ಯಾಗಮೂರ್ತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನಿರಂಜನ ಮಿತ್ತಮಜಲು ವಂದಿಸಿದರು.

ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ್ ಪರಮಹಂಸ ಸ್ವಾಮೀಜಿಯವರು ಮಾ.9 ಸೋಮವಾರ ಪೂ.10 ಗಂಟೆಗೆ ಭಜನಾ ಮಂದಿರಕ್ಕೆ ಆಗಮಿಸಿ ನೂತನ ಮಂದಿರ ವೀಕ್ಷಿಸಿ ಆಶೀರ್ವಚನ ನೀಡಲಿದ್ದಾರೆ ಎಂದು ಭಜನಾ ಮಂದಿರದ ಪದಾಧಿಕಾರಿಗಳು ತಿಳಿಸಿದ್ದಾರೆ.









