ಸುಳ್ಯ: ಪಶ್ಚಿಮ ಬೆಂಗಾಲ್ನಲ್ಲಿ ನಡೆದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸುಳ್ಯ ಜಾಲ್ಸೂರು ಗ್ರಾಮದ ಶರತ್ ಅಡ್ಕಾರ್ ಹಾಗೂ ಶೋಭಾ ದಂಪತಿಗಳ ಪುತ್ರಿ ಸೋನಾ ಅಡ್ಕಾರ್ ತೃತೀಯ ಸ್ಥಾನ ಪಡೆದರು. ಸುಳ್ಯಕ್ಕೆ ಆಗಮಿಸಿದ ಸಂದರ್ಭ ಸುಳ್ಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಬಳಿ ಅವರನ್ನು ಸುಳ್ಯ ಗೌಡರ ಯುವ ಸೇವಾ ಸಂಘ, ನಗರ ಘಟಕ, ಮಹಿಳಾ ಘಟಕ, ಯುವ ಘಟಕ ಹಾಗೂ
ಸುಳ್ಯ ಲಯನ್ಸ್ ಸೇವಾ ಸಂಸ್ಥೆ, ಜೇಸಿ ಸಂಸ್ಥೆ ವತಿಯಿಂದ ಸ್ವಾಗತಿಸಿ ಸನ್ಮಾನಿಸಲಾಯಿತು.
ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ ಮತ್ತು ತಂಡ ಸುಳ್ಯ ಲಯನ್ಸ್ ಸೇವಾ ಸಂಸ್ಥೆ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಮತ್ತು ತಂಡ ಹಾಗೂ ಇನ್ನಿತರರು ಸೋನಾ ಅಡ್ಕಾರ್ರನ್ನು ಸನ್ಮಾನಿಸಿದರು. ಎಂ.ಜಿ.ಎಂ. ಶಾಲಾ ಸಂಚಾಲಕ ದೊಡ್ಡಣ್ಣ ಬರೆಮೇಲು ಅಭಿನಂದಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶರತ್ ಅಡ್ಕಾರು- ಶೋಭಾ ದಂಪತಿ ಹಾಗೂ ಸೋನಾ ಅಡ್ಕಾರ್ರ ಶಿಕ್ಷಕಿ ಶೋಭಾರನ್ನು ಕೂಡಾ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಗರ ಗೌಡ ಸಂಘದ ಅಧ್ಯಕ್ಷ ರಾಕೇಶ್ ಕುಂಟಿಕಾನ, ಕಾರ್ಯದರ್ಶಿ ರಾಧಾಕೃಷ್ಣ ಕುಂತಿನಡ್ಕ, ಯುವ ಗೌಡ ಸಂಘದ ಅಧ್ಯಕ್ಷ ಪ್ರೀತಮ್ ಡಿ.ಕೆ., ಎಸ್.ಆರ್.ಸೂರಯ್ಯ ಸೂಂತೋಡು, ಜಯರಾಮ ದೇರಪ್ಪಜ್ಜನಮನೆ, ಸುಪ್ರೀತ್ ಮೋಂಟಡ್ಕ, ಎಸ್.ಆರ್.ಹೂವಯ್ಯ,ಹರಿಪ್ರಕಾಶ್ ಅಡ್ಕಾರ್, ಲತಾಶ್ರೀ ಸುಪ್ರೀತ್ ಮೋಂಟಡ್ಕ, ಚಂದ್ರಶೇಖರ್, ತಿಮ್ಮಯ್ಯ ಎಂ.ಎಂ., ರಾಮಕೃಷ್ಣ ರೈ, ಅಬ್ದುಲ್ ಖಾದರ್, ಬಲರಾಜ್ ದೇಂಗೋಡಿ, ಶ್ರೀನಿವಾಸ ಮಾಸ್ತರ್ ಹಳೆಗೇಟು, ಜತ್ತಪ್ಪ ರೈ ಸುಳ್ಯ, ಮಲ್ಲಿಕಾರ್ಜುನ ಪ್ರಸಾದ್, ಆನಂದ ಪೂಜಾರಿ ಸುಳ್ಯ, ನಿರಂಜನ್ ಎಂ.ಡಿ., ಬೂಡು ರಮೇಶ್ ಶೆಟ್ಟಿ, ರಾಮಕೃಷ್ನ ಆಲಂಕಲ್ಯ, ರಿಯಾಜ್ ಕಟ್ಟೆಕಾರ್, ಶೈಲೇಶ್ ಅಂಬೆಕಲ್ಲು, ಲೋಕೇಶ್ ಅಂಬೆಕಲ್ಲು, ಚೈತ್ರಾ ದಿನೇಶ್ ಅಡ್ಕಾರ್, ಜಯಲಕ್ಷ್ಮೀ, ಅಶ್ವಿನಿ ಅಂಬೆಕಲ್ಲು, ಚಿತ್ರಾಲೇಖ ಮಡಪ್ಪಾಡಿ, ಹರ್ಷ ಕರುಣಾಕರ, ಮೀನಾಕ್ಷಿ ರಾಮಕಜೆ, ವೀಣಾ ಹರಿಪ್ರಕಾಶ್ ಉಪಸ್ಥಿತರಿದ್ದರು.
ಈಕೆ ಯೋಗಾಭ್ಯಾಸವನ್ನು ಯೋಗಗುರುಗಳಾದ ನವೀನ್ ಪುತ್ತೂರು ಮತ್ತು ಮುಖ್ಯಗುರುಗಳಾದ ಸ್ನೇಹಮಯಿ ವಿವೇಕಾನಂದ ಯೋಗಕೇಂದ್ರ ಕಡೂರಿನ ನವೀನ್ ಕಡೂರು, ರಂಜಿತ್, ವಿಷ್ಣು, ಕಿಶೋರ್ ಮತ್ತು ತಂಡದವರು ತರಬೇತಿ ನೀಡಿದ್ದರು.





