ಸುಳ್ಯ: ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಕಾಂಗ್ರೆಸ್ ಮುಖಂಡ ಸೋಮಶೇಖರ ಕೊಯಿಂಗಾಜೆ ರಾಜಿನಾಮೆ ನೀಡಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ರಾಜಿನಾಮೆ ಘೋಷಣೆ ಮಾಡಿದರು.ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆಗೆ ಹೆಸರು ಕೇಳಿ ಬಂದಿದ್ದ, ಸಂಪಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರೂ
ಆದ ಸೋಮಶೇಖರ ಕೊಯಿಂಗಾಜೆ ಸಂಪಾಜೆ ಕಾಂಗ್ರೆಸ್ನಲ್ಲಿ ಉಂಟಾಗಿರುವ ಶೀತಲ ಸಮರ ಹಾಗು ಪಕ್ಷದಲ್ಲಿ ನಿರಂತರ ಉಂಟಾಗಿರುವ ಒಡಕಿನಿಂದ ಬೇಷತ್ತು ರಾಜಿನಾಮೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಚುನಾವಣಾ ರಾಜಕೀಯದಿಂದಲೂ ಹಿಂದೆ ಸರಿಯುವುದಾಗಿ ಹೇಳಿದ ಅವರು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ ಎಂದು ಹೇಳಿದರು. ನನ್ನ ರಾಜಿನಾಮೆಯನ್ನು ಒಕ್ಟೋಬರ್ 30 2025 ರಂದು ಸಲ್ಲಿಸಿದ್ದು ಇದೀಗ ಅದನ್ನು ಪ್ರಕಟಿಸುತ್ತಿದ್ದೇನೆ ಎಂದು ಹೇಳಿದರು.












