
ಚಿತ್ರಗಳು: ಅಪುಲ್ ಇರಾ.
ಮಂಗಳೂರು: ಮಂಗಳೂರು ಸೇರಿ ಭಾರತದಲ್ಲಿಹಲವು ಕಡೆ ಇಂದು ಸಂಜೆ ಸೂರ್ಯಗ್ರಹಣ ಗೋಚರಿಸಿದೆ. ಮಂಗಳೂರಿನಲ್ಲಿ ಯೂ ಗ್ರಹಣ ದರ್ಶನ ಆಗಿದೆ.ಮೊದಲಿಗೆ ಅಮೃತಸರದಲ್ಲಿ ಸಂಜೆ 4 ಗಂಟೆ 19 ನಿಮಿಷಕ್ಕೆ ಸೂರ್ಯ ಗ್ರಹಣ ಗೋಚರಿಸಿದೆ. ಅಮೃತಸರದ ನಂತರ ದೆಹಲಿಯಲ್ಲಿಯೂ ಗ್ರಹಣ ಗೋಚರಿಸಿದೆ. ಸಂಜೆ 4 ಗಂಟೆ 20 ನಿಮಿಷಕ್ಕೆ

ದೆಹಲಿಯಲ್ಲಿ ಸೂರ್ಯಗ್ರಹಣ ಗೋಚರವಾಗಿದೆ.ಜಮ್ಮು, ಶ್ರೀನಗರ, ನೋಯ್ಡಾದಲ್ಲಿಯೂ ಸೂರ್ಯಗ್ರಹಣ ಗೋಚರಿಸಿದೆ. ಹೃಷಿಕೇಶ್, ಭೂಪಾಲ್, ಮುಂಬೈ, ಕೊಲ್ಕತ್ತಾ, ಅಹಮದಾಬಾದ್, ಲಕ್ನೋ, ಜೈಪುರ್ ಪಾಟ್ನಾದಲ್ಲಿಯೂ ಸೂರ್ಯಗ್ರಹಣ ಗೋಚರವಾಗಿದೆ.ಭಾರತ ಸಹಿತ ಏಷ್ಯಾ ಖಂಡದ ಮಧ್ಯ ಮತ್ತು ಪಶ್ಚಿಮದ ಪ್ರದೇಶ, ಸಂಪೂರ್ಣ ಯುರೋಪ್ ಖಂಡ, ಆಫ್ರಿಕಾ ಖಂಡದ ಪೂರ್ವೋತ್ತರ ಪ್ರದೇಶಗಳಲ್ಲಿ ಗ್ರಹಣ ಕಾಣಲಿದೆ
