ಸುಳ್ಯ:ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸುಳ್ಯ ತಾಲೂಕಿನಲ್ಲಿ ಶೇ.100 ಪೂರ್ತಿಯಾಗಿದೆ ಎಂದು ಸಮೀಕ್ಷೆಯ ಸುಳ್ಯ ತಾಲೂಕು ನೋಡೆಲ್ ಅಧಿಕಾರಿ ತಾ.ಪಂ.ಇಒ ರಾಜಣ್ಣ ಅವರು ತಿಳಿಸಿದ್ದಾರೆ. ಸುಳ್ಯ ತಾಲೂಕಿನಲ್ಲಿ ಒಟ್ಟು
20,988 ಮನೆಗಳು ಎಂದು ನಿಗದಿಪಡಿಸಲಾಗಿತ್ತು.ತಾಲೂಕಿನಲ್ಲಿ ಒಟ್ಟು 22,886 ಯುಎಚ್ಐಡಿ ಸ್ಟಿಕ್ಕರ್ ಅಂಟಿಸಲಾಗಿದ್ದು ಹೆಚ್ಚುವರಿ ಯುಎಚ್ಐಡಿನ್ನು ಹೊಸತು ಎಂದು ಸೇರಿಸಿ ಎಲ್ಲಾ ಯುಎಚ್ಐಡಿ ಸಂಖ್ಯೆಯ ಸಮೀಕ್ಷೆ ಪೂರ್ತಿಯಾಗಿದೆ ಅಂದರೆ ನಿಗದಿತ ಗುರಿಗಿಂತ ಅಧಿಕ ಆಗಿದ್ದು ಶೇ.109 ಆಗಿದೆ ಎಂದು ರಾಜಣ್ಣ ಮಾಹಿತಿ ನೀಡಿದ್ದಾರೆ. ಯಾವುದಾದರೂ ಮನೆ ಬಿಟ್ಟು ಹೋಗಿದ್ದಾರೆಯೇ ಎಂಬುದನ್ನು ಪರಿಶೀಲನೆ ನಡೆಸಲಾಗುವುದು ಎಂದು ಎಂದು ರಾಜಣ್ಣ ಅವರು ತಿಳಿಸಿದ್ದಾರೆ.












