ಸುಳ್ಯ: ಸೂರ್ಯದೇವನ ಹುಟ್ಟುಹಬ್ಬವೆಂದು ಆಚರಿಸಲ್ಪಡುವ ರಥಸಪ್ತಮಿ ದಿನಾಚರಣೆಯನ್ನು ಸ್ನೇಹ ಶಾಲೆಯ ಸೂರ್ಯಾಲಯದಲ್ಲಿ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ ಅವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಮತ್ತು
ಶಿಕ್ಷಕರು ಸಾಮೂಹಿಕ ಸೂರ್ಯನಮಸ್ಕಾರ ಮಾಡಿದರು. ನಂತರ ಸೂರ್ಯಾಷ್ಟಕ ಮಂತ್ರವನ್ನು ಪಠಿಸಿದರು.ಜ್ಞಾನದ ಕಣ್ಣಿನಂತಿರುವ ಸೂರ್ಯನು ಪ್ರಕೃತಿಯ ಪೋಷಕನಾಗಿದ್ದಾನೆ. ಮಾರ್ಗಶಿರ ಮಾಸ,ಶುಕ್ಲ ಪಕ್ಷದ ಏಳನೆಯ ದಿನ ಸೂರ್ಯನು ಸಿಂಹ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನ ಎಂದು ಡಾ.ಚಂದ್ರಶೇಖರ ದಾಮ್ಲೆ ಅವರು ಹೇಳಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ , ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.