ಮುಂಬೈ: ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಗಾಗಿ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಸೋಮವಾರ ಮುಂಬೈನಲ್ಲಿ ನಡೆಯಿತು. ಮಾರಾಟವಾದ ಭಾರತದ ಸ್ಟಾರ್ ಬ್ಯಾಟರ್ ಸ್ಮೃತಿ ಮಂದಾನ 3.4 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸಿದೆ. ಮಹಿಳಾ ಪ್ರೀಮಿಯರ್ ಲೀಗ್ನ ಮೊದಲ ಹರಾಜಿನಲ್ಲಿ ಮಾರಾಟವಾದ ಮೊದಲ ಆಟಗಾರ್ತಿ ಸ್ಮೃತಿ ಮಂದಾನ ಅವರಾಗಿದ್ದಾರೆ. 26 ವರ್ಷದ
ಬ್ಯಾಟರ್ ಸ್ಮೃತಿ ಮಂದಾನ ಅವರ ಮೂಲ ಬೆಲೆ 50 ಲಕ್ಷವಾಗಿತ್ತು. ಭಾರತದ ಟಿ20 ಉಪನಾಯಕಿಗಾಗಿ ಆರ್ಸಿಬಿ ಮತ್ತು ಮುಂಬೈ ಇಂಡಿಯನ್ ನಡುವೆ ತೀವ್ರ ಪೈಪೋಟಿ ನಡೆಯಿತು. ಮಂದಾನ 112 ಟಿ20 ಪಂದ್ಯಗಳಲ್ಲಿ 2,651 ರನ್ ಗಳಿಸಿ ಟಿ20 ಮಾದರಿಯಲ್ಲಿ ಸ್ಥಿರ ಸಾಮರ್ಥ್ಯದ ಮೂಲಕ ಗಮನ ಸೆಳೆದಿದ್ದಾರೆ.ಅತೀ ಹೆಚ್ಚು ಮೊತ್ತಕ್ಕೆ ಮಾರಾಟವಾದ ಇತರ ಆಟಗಾರರು: ಆಶ್ಲೀ ಗಾರ್ಡ್ನರ್ (ಆಲ್ರೌಂಡರ್– ಆಸ್ಟ್ರೇಲಿಯಾ) – ಗುಜರಾತ್ ಜೈಂಟ್ಸ್: 3.20 ಕೋಟಿ
ನತಾಲಿಯಾ ಸ್ಕಿವರ್ (ಆಲ್ರೌಂಡರ್– ಇಂಗ್ಲೆಂಡ್) – ಮುಂಬೈ ಇಂಡಿಯನ್ಸ್: 3.20 ಕೋಟಿ, ದೀಪ್ತಿ ಶರ್ಮಾ (ಆಲ್ರೌಂಡರ್– ಭಾರತ)– ಯುಪಿ ವಾರಿಯರ್ಸ್–2.60 ಕೋಟಿ, ಜೆಮಿಮಾ ರಾಡ್ರಿಗಸ್ (ಬ್ಯಾಟರ್–ಭಾರತ) –ಡೆಲ್ಲಿ ಕ್ಯಾಪಿಟಲ್ಸ್: 2.20 ಕೋಟಿ
ಬೆತ್ ಮೂನೀ (ವಿಕೆಟ್ ಕೀಪರ್ – ಆಸ್ಟ್ರೇಲಿಯ)–ಗುಜರಾತ್ ಜೈಂಟ್ಸ್: 2 ಕೋಟಿ, ಶಫಾಲಿ ವರ್ಮಾ (ಬ್ಯಾಟರ್– ಭಾರತ) – ಡೆಲ್ಲಿ ಕ್ಯಾಪಿಟಲ್ಸ್:2 ಕೋಟಿ,ಪೂಜಾ ವಸ್ತ್ರಕರ್ (ಆಲ್ರೌಂಡರ್–ಭಾರತ) – ಮುಂಬೈ ಇಂಡಿಯನ್ಸ್:1.90 ಕೋಟಿ, ರಿಚಾ ಘೋಷ್ (ವಿಕೆಟ್ ಕೀಪರ್ – ಭಾರತ) – ಆರ್ಸಿಬಿ:1.90 ಕೋಟಿ,ಸೋಫಿ ಎಕ್ಲೆಸ್ಟೋನ್ (ಆಲ್ರೌಂಡರ್–ಇಂಗ್ಲೆಂಡ್)– ಯುಪಿ ವಾರಿಯರ್ಸ್:1.80 ಕೋಟಿ, ಹರ್ಮನ್ಪ್ರಿತ್ ಕೌರ್ (ಆಲ್ರೌಂಡರ್– ಭಾರತ)– ಮುಂಬೈ ಇಂಡಿಯನ್ಸ್:1.80 ಕೋಟಿ