ಸುಳ್ಯ:ಕರ್ನಾಟಕ ರಾಜ್ಯದ ಮಾಜಿಮುಖ್ಯಮಂತ್ರಿ, ಮಾಜಿ ರಾಜ್ಯಪಾಲ, ಒಕ್ಕಲಿಗರ ನಾಯಕರಾದ ಎಸ್.ಎಂ. ಕೃಷ್ಣ ಬೆಂಗಳೂರಿನಲ್ಲಿ ವಿಕಸಸೌಧವನ್ನು ಕಟ್ಟಿದವರು. ಇವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಅವರ ಪ್ರತಿಮೆಯನ್ನು ಬೆಂಗಳೂರಿನ ವಿಕಸಸೌಧದ ಮುಂಭಾಗ ಸ್ಥಾಪಿಸಬೇಕೆಂದು ಗೌಡರ ಯಾನೆ ಒಕ್ಕಲಿಗ ಜಿಲ್ಲಾ ಮಾತೃ ಸಂಘ ಮತ್ತು ಗೌಡರ ಯುವ ಸೇವಾ ಸಂಘದ ವತಿಯಿಂದ ನಡೆದ
ಶ್ರದ್ಧಾಂಜಲಿ ಸಭೆಯಲ್ಲಿ ನಿರ್ಣಯಿಸಿ ಸರಕಾರಕ್ಕೆ ಮನವಿ ಅರ್ಪಿಸಲು
ತೀರ್ಮಾನಿಸಲಾಯಿತು. ಅಲ್ಲದೇ ಗೌಡರ ಯುವ ಸೇವಾ ಸಂಘದ ಸ್ಥಾಪಕ ನಿರ್ದೇಶಕರಾದಎ.ಸಿ.ಹೊನ್ನಪ್ಪ ಅವರ ನಿಧನಕ್ಕೆ ಸಂತಾಪ ಸಲ್ಲಿಸಿತು.ಒಂದು ನಿಮಿಷದ ಮೌನ ಪ್ರಾರ್ಥನೆಯ ಬಳಿಕ ಭಾವಚಿತ್ರಕ್ಕೆ ಪುಷ್ಪ ನಮಿಸಿ ಗೌರವ ಸಲ್ಲಿಸಲಾಯಿತು. ಗೌಡರ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ ಹಾಗೂ ಹಿರಿಯರಾದ ಡಿ.ಎಸ್.ಗಿರೀಶ್ ಅವರು ದೀಪ ಬೆಳಗಿಸಿದರು. ನಿತ್ಯಾನಂದ ಮುಂಡೋಡಿ, ಪಿ.ಸಿ.ಜಯರಾಮ,ಪಿ.ಎಸ್.ಗಂಗಾಧರ, ದಿನೇಶ್ ಮಡಪ್ಪಾಡಿ, ಜನಾರ್ಧನ ಕೊಳಂಜಿರೋಡಿ ಮಾತನಾಡಿ
ಇಬ್ಬರ ಸೇವೆಯನ್ನು ಸ್ಮರಿಸಿದರು. ಗೌಡ ಸಂಘದ ಪ್ರಧಾನ ಕಾರ್ಯದರ್ಶಿ
ಎ.ವಿ.ತೀರ್ಥರಾಮ ಸ್ವಾಗತಿಸಿದರು. ಸುಳ್ಯ ನಗರ ಅಧ್ಯಕ್ಷರಾದ ರಾಕೇಶ್ ಕುಂಟಿಕಾನ ವಂದಿಸಿದರು. ಸಭೆಯಲ್ಲಿ ಅರೆಭಾಷೆ ಅಕಾಡಮಿ ಸದಸ್ಯೆ ಲತಾಪ್ರಸಾದ್ ಕುದ್ಪಾಜೆ ತಾಲೂಕು ತರುಣ ಘಟಕ ಅಧ್ಯಕ್ಷ ಪ್ರೀತಮ್ ಡಿ.ಕೆ, ಕೋಶಾಧಿಕಾರಿ ಸವಿನ್ ಚಾಂತಾಳ, ವಿಠಲ ಗೌಡ
ಬಾಳೂರು,ರಾಧಾಕೃಷ್ಣ ಕುಂತಿನಡ್ಕ, ರಜತ್ಅಡ್ಕಾರ್, ಕೆ.ಟಿ.ವಿಶ್ವನಾಥ, ವರದರಾಜ್ ಸಂಕೇಶ್, ಭೋಜಪ್ಪ ಗೌಡ ಮಾಣಿಬೆಟು ಸತೀಶ್ಚಂದ್ರ ಡಿ.ಹೆಚ್, ವಿಕಾಸ್ ಮೀನಗದ್ದೆ, ಗಿರೀಶ್ ನಾರ್ಕೋಡು ಉಪಸ್ಥಿತರಿದ್ದರು.