ಸುಳ್ಯ:ಮುಹಿಯದ್ದೀನ್ ಜುಮ್ಮಾ ಮಸ್ಜಿದ್, ತರ್ಭಿಯತುಲ್ ಇಸ್ಲಾಂ ಜಮಾಅತ್ ಕಮಿಟಿ, ಮುನವ್ವಿರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸ ಇವುಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಸ್ಮಾರ್ಟ್ ಸ್ಕಾಲರ್ ಶಿಪ್ ಪರೀಕ್ಷೆ ಯಲ್ಲಿ ರಾಂಕ್ ಪಡೆದ ವಿದ್ಯಾರ್ಥಿ ಗಳಿಗೆ ಅಭಿನಂದನಾ ಸಮಾರಂಭ ಜರಗಿತು.ಸಮಾರಂಭದ ಅಧ್ಯಕ್ಷತೆಯನ್ನು
ಎಂಜೆಎಂ ಅಧ್ಯಕ್ಷ ಕೆ. ಎಂ. ಮುಸ್ತಫ ವಹಿಸಿದ್ದರು.
ಗಾಂಧಿನಗರ ಮುದರ್ರಿಸ್ ಇರ್ಫಾನ್ ಸಖಾಫಿ ದುಃವಾ ದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗಾಂಧಿನಗರ ಮದರಸ ವಿದ್ಯಾರ್ಥಿನಿಯರಾದ ಫಾತಿಮತ್ ಶೈಮ ರಾಷ್ಟ್ರೀಯ 6 ನೇ ರಾಂಕ್ ಜಿಲ್ಲಾ ಮಟ್ಟದ 2 ನೇ ರಾಂಕ್,ನಫೀಸತ್ ಶನ್ ಝ ರಾಷ್ಟ್ರೀಯ 11 ನೇ ರಾಂಕ್ ಜಿಲ್ಲಾ ಮಟ್ಟದಲ್ಲಿ 9 ನೇ ರಾಂಕ್, ಅನ್ಸಾರಿಯ ವಿದ್ಯಾರ್ಥಿ ರಾಷ್ಟ್ರೀಯ 9 ನೇ ರಾಂಕ್, ಜಿಲ್ಲಾ ಮಟ್ಟದ 4 ನೇ ರಾಂಕ್ ಪಡೆದು ವಿಶಿಷ್ಟ ಸಾಧನೆ ಮಾಡಿದ್ದರು.ಮುಖ್ಯ ಅತಿಥಿ ಗಳಾಗಿ ಜಿಲ್ಲಾ ಜಮ್ಮೀಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಇಬ್ರಾಹಿಂ ಸಖಾಫಿ ಪುಂಡೂರ್, ಎಂಜೆಎಂ ಪದಾಧಿಕಾರಿಗಳಾದ ಹಾಜಿ ಮಹಮ್ಮದ್ ಕೆಎಂಎಸ್, ಹಾಜಿ ಇಸ್ಮಾಯಿಲ್, ಹಾಜಿ ಮುಹಿಯದ್ದೀನ್ ಫ್ಯಾನ್ಸಿ, ನಿರ್ದೇಶಕರುಗಳಾದ ಜಿ. ಎಂ. ಇಬ್ರಾಹಿಂ ಶಿಲ್ಪಾ, ಹಾಜಿ ಎಸ್. ಎಂ. ಹಮೀದ್, ಮಾಜಿ ಅಧ್ಯಕ್ಷ ಆದo ಹಾಜಿ ಕಮ್ಮಾಡಿ, ಅನ್ಸಾರ್ ಅಧ್ಯಕ್ಷ ಅಬ್ದುಲ್ ಶುಕೂರ್ ಮೊದಲಾದವರು ಉಪಸ್ಥಿತರಿದ್ದರು
ನಗರ ಪಂಚಾಯತ್ ಸದಸ್ಯ ಕೆ. ಎಸ್. ಉಮ್ಮರ್ ಶುಭಾoಶನೆ ಗೈದರು ನಿಸಾರ್ ಸಖಾಫಿ ಸ್ವಾಗತಿಸಿ ಕೆ. ಬಿ. ಅಬ್ದುಲ್ ಮಜೀದ್ ವಂದಿಸಿದರು








