ಗುತ್ತಿಗಾರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ.ಟ್ರಸ್ಟ್. ಗುತ್ತಿಗಾರು ವಲಯ ವತಿಯಿಂದ ಸಾಮೂಹಿಕ ಶ್ರೀ ಧನ್ವಂತರಿ ಪೂಜೆ ಮತ್ತು ಧಾರ್ಮಿಕ ಸಭೆ ವಳಲಂಬೆ ಶ್ರೀ ಶಂಕಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಿತು. ಸಾಮೂಹಿಕ ಶ್ರೀ ಧನ್ವಂತರಿ ಪೂಜಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಜನಜಾಗೃತಿ ವೇದಿಕೆ, ಶೌರ್ಯ ವಿಪತ್ತು ನಿರ್ವಹಣಾ ತಂಡ, ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ ಹಾಗೂ
ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಗುತ್ತಿಗಾರು ವಲಯ.ಇವರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಿತು.ಧಾರ್ಮಿಕ ಮುಖಂಡ ರಾಜೇಶ್ ಮೇನಾಲ ಉದ್ಘಾಟಿಸಿ, ಧಾರ್ಮಿಕ ಉಪನ್ಯಾಸ ನೀಡಿದರು. ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಪಿ.ಸಿ ಜಯರಾಮ ಅವರನ್ನು ಗೌರವಿಸಲಾಯಿತು. ಒಕ್ಕೂಟದ ಪದಾಧಿಕಾರಿಗಳಿಗೆ ಮತ್ತು ವಿಪತ್ತು ನಿರ್ವಹಣಾ ಘಟಕದ ಸದಸ್ಯರನ್ನು ಗೌರವಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವೆಂಕಟ್ ವಳಲಂಬೆ, ಸುಳ್ಯ ತಾಲೂಕು ಸ್ವಸಹಾಯ ಸಂಘಗಳ ಒಕ್ಕೂಟಗಳ ಕೇಂದ್ರ ಸಮಿತಿ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಸಮಿತಿಯ ಗೌರವಾಧ್ಯಕ್ಷರಾದ ಮಿತ್ರದೇವ ಮಡಪ್ಪಾಡಿ ಮಾತನಾಡಿದರು.ಪೂಜಾ ಸಮಿತಿ ಅಧ್ಯಕ್ಷ ಯೋಗೀಶ್ ದೇವ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ತಾಲೂಕು ನಿರ್ದೇಶಕಿ ರವಿಕಲಾ ಚೆಮ್ನೂರು, ಗುತ್ತಿಗಾರು ಭಜನಾ ಪರಿಷತ್ ಅಧ್ಯಕ್ಷ ಪೂರ್ಣಚಂದ್ರ ಪೈಕ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ತಾಲೂಕು ಕ್ಯಾಪ್ಟನ್ ಸತೀಶ್ ಬಂಬುಳಿ,
ಬಾಬು ಮಾಸ್ತರ್ ಆಚ್ರಪ್ಪಾಡಿ, ಮುಳಿಯ ಕೇಶವ ಭಟ್, ಬಿ.ಕೆ.ಬೆಳ್ಯಪ್ಪ ಗೌಡ,ನಳಿನಾಕ್ಷ ಹಿರಿಯಡ್ಕ, ವಿಜಯಕುಮಾರ್ ಚಾರ್ಮಾತ,ಕೇಶವ ಹೊಸೊಳಿಕೆ, ವೇಣುಕುಮಾರ್ ಚಿಲ್ತಡ್ಕ, ಉಪಸ್ಥಿತರಿದ್ದರು. ಯೋಜನಾಧಿಕಾರಿ ಮಾದವ ಗೌಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಗುತ್ತಿಗಾರು ವಲಯ ಮೇಲ್ವಿಚಾರಕ ರಾಜೇಶ್ ವಲಯದ ವರದಿ ವಾಚಿಸಿದರು.
ಒಕ್ಕೂಟಗಳ ಸದಸ್ಯರಿಗೆ ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಿಶೋರ್ ಕುಮಾರ್ ಪೈಕ, ಹಾಗೂ ಹರಿಶ್ಚಂದ್ರ ಕುಳ್ಳಂಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.












