ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ಹಾಗೂ ಬಾರ್ಬಾರ್ಸ್ ಎಸೋಸಿಯೇಶನ್ ಸುಳ್ಯ ವತಿಯಿಂದ ಸುಳ್ಯ ಯೋಜನಾ ಕಛೇರಿ ಸಭಾಂಗಣದಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಪ್ರಾಥಮಿಕ ಮಾಹಿತಿ ಕಾರ್ಯಗಾರ ಹಾಗೂ ನೋಂದಾವಣೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ.ಕ್ಷೇ,ಧ.ಗ್ರಾ. ಯೋಜನೆಯ ಯೋಜನಾಧಿಕಾರಿ ನಾಗೇಶ್ ಪಿ ನೆರವೇರಿಸಿದರು. ಪಿ.ಎಮ್ ವಿಶ್ವಕರ್ಮ ಯೋಜನೆ ಕೇಂದ್ರ ಸರ್ಕಾರದ
ಯೋಜನೆಯಾಗಿದ್ದು, ಪ್ರಧಾನ ಮಂತ್ರಿಯವರು 17 ಸೆಪ್ಟಂಬರ್ 2023ರಂದು ಈ ಯೋಜನೆಗೆ ಚಾಲನೆ ನೀಡಿರುತ್ತಾರೆ. ಸದ್ರಿ ಕಾರ್ಯಕ್ರಮದಲ್ಲಿ 18 ಸಾಂಪ್ರದಾಯಿಕ ವಹಿವಾಟುಗಳನ್ನು ಪಿ.ಎಮ್ ವಿಶ್ವಕರ್ಮ ಯೋಜನೆಯು ಒಳಗೊಂಡಿದ್ದು, ಇವುಗಳಲ್ಲಿ ಬಡಗಿ ಕೆಲಸ ಮಾಡುವವರು, ಕಮ್ಮಾರರು, ಕುಂಬಾರರು, ಅಕ್ಕಸಾಲಿಗರು, ಮೂರ್ತಿ ಮಾಡುವ ಶಿಲ್ಪಿ, ಕಲ್ಲು ಒಡೆಯುವವರು, ಚಮ್ಮಾರ, ಪಾದರಕ್ಷೆ ತಯಾರಕರು, ಗಾರೆ ಮೇಸ್ತ್ರಿಗಳು,ಬುಟ್ಟಿ/ಚಾಪೆ/ಹಿಡಿಸೂಡಿ ತಯಾರಕರು,ಸೆಣಬು ನೇಕಾರರು, ಗೊಂಬೆ & ಆಟಿಕೆ ತಯಾರಕರು, ಕ್ಷೌರಿಕರು, ಮಾಲೆ ತಯಾರಕರು, ಧೋಬಿ ಅಥವಾ ಮಡಿವಾಳರು, ಟೈಲರ್, ಸುತ್ತಿಗೆ ಮತ್ತು ಇತರೆ ಸಾಮಾಗ್ರಿ ತಯಾರಕರು ಒಳಗೊಂಟಿದೆ.ಇವುಗಳ ಕುರಿತು ಮಂಗಳೂರು ಜಿಲ್ಲಾಧಿಕಾರಿ ಕಚೇರಿಯ ಸಿ.ಎಸ್.ಸಿ ವಿಭಾಗದ ಜಿಲ್ಲಾ ಪ್ರಬಂಧಕರಾದ ಗೋವರ್ಧನ್ ವಿಶ್ವಕರ್ಮ ಯೋಜನೆಯ ಕುರಿತು ಮಾಹಿತಿಯನ್ನು ನೀಡಿದರು. ಸಿ.ಎಸ್.ಸಿ ಕಾರ್ಯಕ್ರಮಗಳ ಮತ್ತು ಸವಲತ್ತುಗಳ ಕುರಿತು ಸಿ.ಎಸ್,ಸಿ ವಿಭಾಗದ ಜಿಲ್ಲಾ ನೋಡಲ್ ಅಧಿಕಾರಿ ರಾಮ್ ಮಾಹಿತಿಯನ್ನು ನೀಡಿದರು. 70 ಜನ ತರಬೇತಿಯಲ್ಲಿ ಭಾಗವಹಿಸಿ ವಿಶ್ವಕರ್ಮ ಯೋಜನೆಗೆ, ನೊಂದಾವಣೆ ಮಾಡಲಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ
ಬಾರ್ಬಾರ್ಸ್ ಎಸೋಸಿಯೇಶನ್ನ ಅಧ್ಯಕ್ಷ
ಪದ್ಮನಾಭ ಭಂಡಾರಿ , ಕಾರ್ಯದರ್ಶಿ ಭವಾನಿ ಶಂಕರ್ ಕೇರ್ಪಳ ಖಜಾಂಜಿ ಧನಂಜಯ ಮೂರ್ನಾಡ್ ಖಜಾಂಜಿ , ಸಿ.ಎಸ್.ಸಿ ವಿಭಾಗದ ತಾಲೂಕು ನೋಡಲ್ ಅಧಿಕಾರಿ ಹೇಮಂತ್ ಉಪಸ್ಥಿತರಿದ್ದರು. ಭವಾನಿ ಶಂಕರ್ ಕೇರ್ಪಳ ಸ್ವಾಗತಿಸಿ, ಉದಯ ವಂದಿಸಿದರು.










