ಸುಳ್ಯ:ಆಲೆಟ್ಟಿ ಗ್ರಾಮದ ಕಲ್ಚರ್ಪೆಯ ಸಿರಿ ಕುರಲ್ ನಗರದ ಶ್ರೀ ವನದುರ್ಗಾ ರಕ್ತೇಶ್ವರಿ ಪರಿವಾರ ದೈವಗಳ ಸೇವಾ ಟ್ರಸ್ಟ್ ಮತ್ತು ಉತ್ಸವ ಸಮಿತಿಯ ಆಶ್ರಯಲ್ಲಿ ಶ್ರೀ ವನದುರ್ಗಾ ರಕ್ತೇಶ್ವರಿ ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಗುಳಿಗ ದೈವದ ನೇಮೋತ್ಸವ
ನಡೆಯಿತು. ಬೆಳಿಗ್ಗೆ ಸ್ಥಳ ಶುದ್ದಿ, ಗಣಹೋಮ, ವನದುರ್ಗಾ ಹೋಮ, ಆಶ್ಲೇಷ ಬಲಿ,ತಂಬಿಲ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಸಂಜೆ 6 ರಿಂದ ಗುಳಿಗ ದೈವದ ನೇಮ, ರಾತ್ರಿ 10ಕ್ಕೆ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ನಿರಂತರ ಭಜನಾ ಕಾರ್ಯಕ್ರಮ,ಸಭಾ ಕಾರ್ಯಕ್ರಮ ನಡೆಯಿತು.










