ಸುಳ್ಯ:ಆಲೆಟ್ಟಿ ಗ್ರಾಮದ ಕಲ್ಚರ್ಪೆಯ ಸಿರಿ ಕುರಲ್ ನಗರದ ಶ್ರೀ ವನದುರ್ಗಾ ರಕ್ತೇಶ್ವರಿ ಪರಿವಾರ ದೈವಗಳ ಸೇವಾ ಟ್ರಸ್ಟ್ ಮತ್ತು ಉತ್ಸವ ಸಮಿತಿಯ ಆಶ್ರಯಲ್ಲಿ ಶ್ರೀ ವನದುರ್ಗಾ ರಕ್ತೇಶ್ವರಿ ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಸಭಾ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಮಾತನಾಡಿ’ ಸಿರಿಕುರಲ್ ನಗರದ ದೈವ ಸಾನ್ನಿಧ್ಯವು ಮುಂದಿನ ದಿನಗಳಲ್ಲಿ

ಪ್ರಮುಖ ಧಾರ್ಮಿಕ ಕೇಂದ್ರವಾಗಿ ಬೆಳಗಲಿ ಎಂದು ಆಶಿಸಿದರು.
ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ ಮಾತನಾಡಿ’ ಸಿರಿಕುರಲ್ ನಗರದ ದೈವಿಕ ಸಾನ್ನಿಧ್ಯಕ್ಕೆ ಇನ್ನಷ್ಟು ಭಕ್ತರು ಹರಿದು ಬರಬೇಕು ಎಂದು ಹೇಳಿದರು.

ಸೂರ್ತಿಲ ಶ್ರೀ ರಕ್ತೇಶ್ವರಿ ಕ್ಷೇತ್ರದ ಅಧ್ಯಕ್ಷ ನಾರಾಯಣ ಕೇಕಡ್ಕ ಮಾತನಾಡಿ’ ಈ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದಿ ಭಕ್ತರ ಇಷ್ಟಾರ್ಥ ಸಾಧಿಸುವ ಶಕ್ತಿ ಕೇಂದ್ರವಾಗಿ ಬೆಳಗಲಿದೆ ಎಂದು ಹೇಳಿದರು.
ಶ್ರೀ ವನದುರ್ಗಾ ರಕ್ತೇಶ್ವರಿ ಪರಿವಾರ ದೈವಗಳ ಸೇವಾ ಟ್ರಸ್ಟ್ನ ಅಧ್ಯಕ್ಷ ಕೆ.ಗೋಕುಲ್ದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಉತ್ಸವ ಸಮಿತಿಯ ಗೌರವಾಧ್ಯಕ್ಷ ವಾಸುದೇವ ಗೌಡ ಕುಡೆಕಲ್ಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾ ಕುಮಾರಿ, ಸದಸ್ಯರಾದ ಸುಧೇಶ್ ಅರಂಬೂರು, ಅನಿತಾ ಇಡ್ಯಡ್ಕ, ವೇದಾವತಿ ನೆಡ್ಚಿಲ್,ಉತ್ಸವ ಸಮಿತಿ ಅಧ್ಯಕ್ಷ ಕರುಣಾಕರ ಪಾಲಡ್ಕ, ಪ್ರಗತಿಪರ ಕೃಷಿಕರಾದ ಲೋಕೇಶ್ ಸುಳ್ಳಿ, ಭಾಗವಹಿಸಿದ್ದರು.
ಸಂಚಾಲಕರಾದ ಅಶೋಕ್ ಪಿ.ಬಿ. ಸ್ವಾಗತಿಸಿ, ಸುಧೇಶ್ ಅರಂಬೂರು ವಂದಿಸಿದರು. ಶಶಿಧರ ಎಂ.ಜೆ.ಕಾರ್ಯಕ್ರಮ ನಿರೂಪಿಸಿದರು.










