ಕೊಲಂಬೊ:ಭಾರತದ ವೇಗಿ ಮೊಹಮ್ಮದ್ ಸಿರಾಜ್ ಫೈನಲ್ ಪಂದ್ಯದಲ್ಲಿ ತಮಗೆ ನೀಡಲಾದ ಪಂದ್ಯಶ್ರೇಷ್ಠ ನಗದು ಬಹುಮಾನ 5,000 ಡಾಲರ್(4.15 ಲಕ್ಷ) ಅನ್ನು ಏಷ್ಯಾ ಕಪ್ ಕ್ರಿಕೆಟ್ ಸರಣಿಯಲ್ಲಿ ಮಳೆಯಿಂದ ಒದ್ದೆಯಾಗುತ್ತಿದ್ದ ಕ್ರೀಡಾಂಗಣವನ್ನು ನಿರ್ವಹಣೆ ಮಾಡುವಲ್ಲಿ ಕೆಲಸ ಮಾಡಿದ ಶ್ರೀಲಂಕಾದ ಕ್ರೀಡಾಂಗಣ ಸಿಬ್ಬಂದಿಗೆ ನೀಡಿದ್ದಾರೆ.
ಈ ನಗದು ಬಹುಮಾನವು ಮೈದಾನ ಸಿಬ್ಬಂದಿಗೆ ಸೇರುತ್ತದೆ. ಇದಕ್ಕೆ
ಅವರು ಸಂಪೂರ್ಣವಾಗಿ ಅರ್ಹರು. ಅವರಿಲ್ಲದೆ ಈ ಪಂದ್ಯಾವಳಿಯು ಸಾಧ್ಯವಾಗುತ್ತಿರಲಿಲ್ಲ’ಎಂದು ಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ ಭಾರತ 10 ವಿಕೆಟ್ಗಳ ಜಯ ಸಾಧಿಸಿದ ನಂತರ ಪ್ರಶಸ್ತಿ ಸಮಾರಂಭದಲ್ಲಿ ಸಿರಾಜ್ ಹೇಳಿದರು. ಈ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ ಸಿರಾಜ್ ಒಂದೇ ಓವರ್ನಲ್ಲಿ 4 ವಿಕೆಟ್ ಕಬಳಿಸುವ ಮೂಲಕ ಶ್ರೀಲಂಕಾ ಸೋಲನ್ನು ಖಚಿತಪಡಿಸಿದ್ದರು. 21 ರನ್ಗೆ 6 ವಿಕೆಟ್ ಉರುಳಿಸಿದ ಅವರು ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದರು. ಇದರ ಪರಿಣಾಮ, ಶ್ರೀಲಂಕಾ 50 ರನ್ಗೆ ಆಲೌಟ್ ಆದರೆ, ಭಾರತ ಈ ಗುರಿಯನ್ನು ಯಾವುದೇ ವಿಕೆಟ್ ನಷ್ಟವಿಲ್ಲದೆ ತಲುಪಿತು.
ಇದಕ್ಕೂ ಮುನ್ನ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಜಯ್ ಶಾ ಅವರು ಕ್ಯಾಂಡಿ ಮತ್ತು ಕೊಲಂಬೊದಲ್ಲಿನ ಮೈದಾನದ ನಿರ್ವಹಣೆಯಲ್ಲಿ ಶ್ರಮ ವಹಿಸಿದ್ದ ಸಿಬ್ಬಂದಿಗೆ 50,000 ಡಾಲರ್(₹42 ಲಕ್ಷ) ನಗದು ಬಹುಮಾನವನ್ನು ಘೋಷಿಸಿದ್ದರು. ಏಷ್ಯಾಕಪ್ ಟೂರ್ನಿಯಲ್ಲಿ ಮಳೆ ತೀವ್ರ ಸಮಸ್ಯೆ ಉಂಟು ಮಾಡಿತ್ತು.