ಸಂಪಾಜೆ: ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಶ್ಯಾಮ್ ಭಟ್ ರವರನ್ನು ಸಂಪಾಜೆಯ ಪ್ರಮುಖರು ಭೇಟಿ ಮಾಡಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್. ಕೆ ಹನೀಫ್. ಮಾಜಿ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ, ಶಾಲಾ ಮುಖ್ಯ್ಯೊಪಾಧ್ಯಾಯಿನಿ ಚಂದ್ರಾವತಿ, ಪ್ರೌಢಶಾಲೆ ವಿಭಾಗದ ಎಸ್. ಡಿ. ಎಂ. ಸಿ ಅಧ್ಯಕ್ಷ ಹೊನ್ನಪ್ಪ ಆಚಾರ್ಯ, ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಎಸ್. ಡಿ. ಎಂ. ಸಿ ಅಧ್ಯಕ್ಷ ಮಹಮ್ಮದ್ ಹನೀಫ್ ಉಪಸ್ಥಿತರಿದ್ದರು. ಕಲ್ಲುಗುಂಡಿ ಸರಕಾರಿ ಶಾಲೆಯ ರಂಗ ಮಂದಿರ ನಿರ್ಮಾಣಕ್ಕೆ ಕೀಲಾರು ಪ್ರತಿಷ್ಟಾನದ ವತಿಯಿಂದ ಧನ ಸಹಾಯ ನೀಡುವಂತೆ ಮನವಿ ಸಲ್ಲಿಸಲಾಯಿತು.












