ಸುಳ್ಯ:ಸುಳ್ಯದಲ್ಲಿ ಇಂದು ಬಹುತೇಕ ಅಂಗಡಿ ಮುಂಗಟ್ಟುಗಳು ತೆರೆದಿಲ್ಲ.
ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆಯ ಹಿನ್ನಲೆಯಲ್ಲಿ ಸುಳ್ಯದ ಬಹುತೇಕ ಹಿಂದೂ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದಾರೆ. ಶ್ರೀರಾಮ ಮಂದಿರ
ಲೋಕಾರ್ಪಣೆಯ ಹಿನ್ನಲೆಯಲ್ಲಿ ಗೌರವ ಸಲ್ಲಿಸಿ ಮತ್ತು ವಿವಿಧ ದೇವಾಲಯಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದ ಕಾರಣ ಅಂಗಡಿಗೆ ರಜೆ ಇರುವುದಾಗಿ ಕೆಲವು ಅಂಗಡಿ ಮಾಲಕರು ಮೊದಲೇ ಪ್ರಕಟಿಸಿದ್ದರು.
ಅಗತ್ಯ ಸೇವೆ ಹೊರತುಪಡಿಸಿ ಬಹುತೇಕ ಹಿಂದೂ ವರ್ತಕರು ಅಂಗಡಿ ಮುಂಗಟ್ಟುಗಳನ್ನು ತೆರೆದಿಲ್ಲ. ಇದರಿಂದ ನಗರ ಭಾಗಷಃ ಬಂದ್ ಆದ ಪ್ರತೀತಿ ಉಂಟಾಗಿದೆ.













