The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ
The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ

ಅಡಿಕೆ ಎಲೆ ಚುಕ್ಕಿ, ಹಳದಿ ರೋಗ ಕುರಿತು ಸಂಶೋಧನೆಗೆ ಸಮಿತಿ ರಚನೆ-ಸಮಗ್ರ ಅಧ್ಯಯನ ನಡೆಸಿ ಪರಿಹಾರ: ಸಚಿವೆ ಶೋಭಾ ಕರಂದ್ಲಾಜೆ

by ದಿ ಸುಳ್ಯ ಮಿರರ್ ಸುದ್ದಿಜಾಲ October 27, 2022
by ದಿ ಸುಳ್ಯ ಮಿರರ್ ಸುದ್ದಿಜಾಲ October 27, 2022
Share this article

ವರದಿ:ಬಾಲಕೃಷ್ಣ ಕೊಯಿಲ.
ಕಾಣಿಯೂರು:ಅಡಿಕೆ ಎಲೆ ಚುಕ್ಕಿ ಹಾಗೂ ಹಳದಿ ರೋಗ ಬಾದೆಯ ಬಗ್ಗೆ ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ವಿಜ್ಞಾನಿಗಳನ್ನೊಳಗೊಂಡ ಅಧ್ಯಯನ ಸಮಿತಿಯನ್ನು ರಚಿಸಿದ್ದು ಈ ಕರಿತು ಸಮಗ್ರ ಅಧ್ಯಯನ ನಡೆಸಿ ಪರಿಹಾರ ಕಂಡು ಕೊಳ್ಳಲಾಗುವುದು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಗುರವಾರ ಮೂರು ಕೋಟಿ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಂಡ ಬೈತಡ್ಕ-ಗುಜ್ಜರ್ಮೆ ರಸ್ತೆ ಉದ್ಘಾಟಿಸಿದ ಬಳಿಕ ಕಾಣಿಯೂರಿನಲ್ಲಿ

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಕಾಣಿಯೂರು ಗ್ರಾ.ಪಂಚಾಯಿತಿ ಸಭಾಭವನ ಕಟ್ಟಡ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಅಡಿಕೆಗೆ ಹಳದಿ ರೋಗ ಬಾದೆ ತೀವ್ರವಾಗಿ ಹರಡಿದೆ. ಅದರ ಬೆನ್ನಿಗೆ ಎಲೆಚುಕ್ಕಿ ರೋಗ ವ್ಯಾಪವಾಗುತ್ತಿದೆ, ಇದರಿಂದಾಗಿ ರೈತರು ಕಂಗಾಲಾಗಿದ್ದು, ಅದರ ಅಧ್ಯಯನ ನಡೆಸುವುದಕ್ಕಾಗಿ ಕೇಂದ್ರ ಸಮಿತಿ ರಚನೆಯಾಗಿದೆ, ತೋಟಗಾರಿಕೆ, ಸಿಪಿಸಿಆರ್‌ಐ ಹಾಗೂ ಕೃಷಿಗೆ ಸಂಬಂಧಪಟ್ಟ ವಿಜ್ಞಾನಿಗಳ ತಂಡವನ್ನು ಮಾಡಿ ದೇಶದ ವಿವಿಧ ಭಾಗಗಳಲ್ಲಿ ಅಧ್ಯಯನ ನಡೆಸಲು ತೀರ್ಮಾನಿಸಲಾಗಿದ್ದು, ಶೀಘ್ರವೇ ರೋಗಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು. ಈ ಹಿಂದಿನ ಯುಪಿಎ ಸರಕಾರದ ಅಧಿಕಾರಿಯೊಬ್ಬರು ಅಡಿಕೆಯಲ್ಲಿ ಕ್ಯಾನ್ಸ‌ರ್‌ಕಾರಕ ಅಂಶ ಇದೆ ಎಂದು ವರದಿ ನೀಡಿದ್ದರು. ಇದರ ಪರಿಣಾಮವಾಗಿ ಅಡಕೆ ಮೇಲೆ ನಿಷೇಧದ ತೂಗುಗತ್ತಿ ನೇತಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ರಾಜ್ಯದ ಸಂಸದರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಅಡಿಕೆ ಹಾನಿಕಾರಕವಲ್ಲ ಎಂದು ಮನವರಿಗೆ ಮಾಡಿರುವುದಲ್ಲದೆ ಸರಕಾರ ಸುಪ್ರೀಂ ಕೋರ್ಟ್‌ಗೆ ಮನದಟ್ಟು ಮಾಡುವ ಕಾರ್ಯವನ್ನು ಮಾಡಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿದ್ದ ಬಂದರು, ಮೀನುಗಾರಿಕೆ, ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಮಾತನಾಡಿ ಕೇಂದ್ರದಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಅಭಿವೃದ್ಧಿಗೆ ವೇಗ ದೊರೆತಿದ್ದು ಗ್ರಾಮೀಣ ಭಾಗದ ಅನೇಕ ರಸ್ತೆಗಳಿಗೆ ಕಾಯಕಲ್ಪ ಆಗಿದೆ, ರಾಜ್ಯದಲ್ಲಿ ಆಡಳಿತವಿರುವ ಬಿಜೆಪಿ ಸರಕಾರ ಸುಳ್ಯ ವಿಧಾನ ಸಭಾ ಕೇತ್ರಕ್ಕೆ ಅತೀ ಹೆಚ್ಚು ಅನುದಾನ ನೀಡಿ ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ ಎಂದರು.ಕಡಬ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಮಾತನಾಡಿದರು. ಕಾಣಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ದರ್ಖಾಸು, ಪಿಡಿಒ ಎಂ.ದೆವರಾಜ್, ಸದಸ್ಯರಾದ ಪ್ರವೀಣ್‌ಚಂದ್ರ ರೈ ಕುಮೇರು, ವಿಶ್ವನಾಥ ಕೊಪ್ಪ, ದೇವಿಪ್ರಸಾದ್ ದೋಳ್ಪಾಡಿ, ಸುಲೋಚನಾ ಮಿಯ್ಯೊಳ್ಪೆ, ಮೀರಾ ಕಳೆಂಜೋಡಿ, ಗಂಗಮ್ಮ ಗುಜ್ಜರ್ಮೆ, ಅಂಬಾಕ್ಷಿ ಕೂರೇಲು, ತೇಜಕುಮಾರಿ ಉದ್ಲಡ್ಡ, ಕೀರ್ತಿಕುಮಾರಿ ಅಂಬುಲ, ಸುನಂದ ಅಬ್ಬಡ, ತಾರಾನಾಥ ಇಡ್ಯಡ್ಕ, ಲೋಕಯ್ಯ ಪರವ ದೋಲ್ಪಾಡಿ ಉಪಸ್ಥಿತರಿದ್ದರು. ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಉದನಡ್ಕ ಪ್ರಸ್ತಾವನೆಗೈದು, ಸ್ವಾಗತಿಸಿದರು. ಸದಸ್ಯ ರಾಮಣ್ಣ ಗೌಡ ಮುರಂಜ ವಂದಿಸಿದರು. ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಅಭಿವೃದ್ಧಿ ಉದ್ಘಾಟನೆ;
ರಾಜ್ಯ ಸರಕಾರದ ವಿಶೇಷ ಅನುದಾನ ಮೂರು ಕೋಟಿ ರೂ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಂಡ ಬೈತಡ್ಕ -ಗುಜ್ಜರ್ಮೆ ರಸ್ತೆಯ ಉದ್ಘಾಟನೆ.
೨೫ ಲಕ್ಷ ರೂ ವೆಚ್ಚದ ಗ್ರಾ.ಪಂ ಸಭಾ ಭವನ ಉದ್ಘಾಟನೆ.
ಗ್ರಾ.ಪಂ ಕಛೇರಿ ಎದುರು ೨.೫ ಲಕ್ಷ ರೂ ವೆಚ್ಚದಲ್ಲಿ ಹಾಸಲಾದ ಇಂಟರ್ ಲಾಕ್ ಉದ್ಘಾಟನೆ,ಗ್ರಾ,ಪಂ ಕಛೇರಿಗೆ ೨.೫ ಲಕ್ಷ ರೂ ವೆಚ್ಚದಲ್ಲಿ ಅಳವಡಿಸಲಾದ ಸೋಲರ್ ವ್ಯವಸ್ಥೆಯ ಉದ್ಘಾಟನೆ. ಪಂ. ಕಟ್ಟಡದಲ್ಲಿ ಪ್ರಾರಂಭವಾದ ಜನೌಷಧಿ ಕೇಂದ್ರದ ಉದ್ಘಾಟನೆ,ಕಾರ್ಯಕ್ರಮದಲ್ಲಿ ಈ ಹಿಂದೆ ಕಾಣಿಯೂರು ಗ್ರಾ.ಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ. ಅಂತರಾಷ್ಟ್ರೀಯ ಕ್ರೀಡಾಪಟು ದೀಕ್ಷಾ ಕುಕ್ಕುನಡ್ಕ ಹಾಗೂ ಯೋಗ ಪ್ರತಿಭೆ ಪ್ರಣಮ್ಯಾ ಅವರಿಗೆ ಸನ್ಮಾನ.ಗುತ್ತಿಗೆದಾರರಾದ ಜಲೀಲ್ ಬೈತಡ್ಕ, ಹಸೈನರ್ ಹಾಗೂ ಇಂಜೀನಿಯರ್ ಹರೀಶ್ ಅವರಿಗೆ ಗೌರವಾರ್ಪಣೆ ನಡೆಯಿತು.

ದಿ ಸುಳ್ಯ ಮಿರರ್ ಸುದ್ದಿಜಾಲ

ದಿ ಸುಳ್ಯ ಮಿರರ್‌ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್‌ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್‌ ಮಾಡಿರಿ.

previous post
ಸರಕಾರದಿಂದ ಅಲ್ಪ ಸಂಖ್ಯಾತರ ಕಡೆಗಣನೆ ಎಂಬುದು ಸುಳ್ಳು ಆರೋಪ: ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿಕೆ
next post
ಟಿ20 ವಿಶ್ವಕಪ್: ಕೊಹ್ಲಿ, ರೋಹಿತ್, ಯಾದವ್ ಬಿರುಸಿನ ಅರ್ಧಶತಕ- ನೆದರ್ಲೆಂಡ್ಸ್ ಮಣಿಸಿದ ಭಾರತಕ್ಕೆ ಎರಡನೇ ಜಯ

You may also like

ಗೃಹಲಕ್ಷ್ಮಿ ಯೋಜನೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಸರಕಾರ

June 7, 2023

ಅರಬ್ಬಿ ಸಮುದ್ರದಲ್ಲಿ ‘ಬಿಪರ್ಜೋಯ್’ ಚಂಡಮಾರುತ ಸೃಷ್ಟಿ: ತೀವ್ರ ಸ್ವರೂಪ ಪಡೆಯುತ್ತಿರುವ...

June 7, 2023

ಸಂಪಾಜೆಯ ನದಿಗಳಲ್ಲಿ ತುಂಬಿದ ಹೂಳು ತೆಗೆಯುವ ಕಾರ್ಯಾಚರಣೆಗೆ ಚಾಲನೆ

June 7, 2023

ಜೂ.7 ರಿಂದ ಸಂಪಾಜೆಯ ನದಿಗಳಲ್ಲಿ ತುಂಬಿದ ಹೂಳು ತೆಗೆಯುವ ಕಾರ್ಯಾಚರಣೆ...

June 6, 2023

ಸುಳ್ಯ ನಗರ ಪಂಚಾಯತ್ ಪರಿಸರ ಈಗ ತ್ಯಾಜ್ಯ ಮುಕ್ತ..! ನ.ಪಂ.ಸುತ್ತಲೂ...

June 6, 2023

ಡೆಂಗ್ಯೂ, ಮಲೇರಿಯಾ ಬಗ್ಗೆ ಮುನ್ನೆಚ್ಚರಿಕೆ ಇರಲಿ: ಡಾ. ಕುಮಾರ್

June 6, 2023

ನೈತಿಕ ಪೊಲೀಸ್​ಗಿರಿ ತಡೆಗೆ ‘ಆ್ಯಂಟಿ ಕಮ್ಯುನಲ್ ವಿಂಗ್’ ಸ್ಥಾಪನೆ: ಗೃಹ...

June 6, 2023

ಕಲ್ಲುಗುಂಡಿ: ಸಂತೆ ಮಾರುಕಟ್ಟೆ ಸಂಕೀರ್ಣ ಲೋಕಾರ್ಪಣೆ

June 6, 2023

ಸಂಪಾಜೆ ಗ್ರಾಮದ ಮೂಲಭೂತ ಅಭಿವೃದ್ಧಿಗಾಗಿ ಹೋರಾಟ: ಸಂಪಾಜೆ ಮೂಲಭೂತ ಸೌಕರ್ಯಗಳ...

June 6, 2023

ಬಾಡಿಗೆ ಮನೆಯಲ್ಲಿ ವಾಸಿಸುವವರಿಗೂ ಉಚಿತ ವಿದ್ಯುತ್: ಸಿಎಂ ಸಿದ್ದರಾಮಯ್ಯ

June 6, 2023

Leave a Comment Cancel Reply

ಇತ್ತೀಚಿನ ಸುದ್ದಿಗಳು

  • ಬಿ.ಎಸ್.ಯಡಿಯೂರಪ್ಪ ಸೇರಿ ಬಿಜೆಪಿ ರಾಜ್ಯ ಮುಖಂಡರ ಭೇಟಿಯಾದ ಶಾಸಕಿ ಭಾಗೀರಥಿ ಮುರುಳ್ಯ
  • ನಗರ ಸ್ವಚ್ಛತಾ ಅಭಿಯಾನ: ಆಲೆಟ್ಟಿ ರಸ್ತೆಯಲ್ಲಿ 37ನೇ ವಾರದ ಸ್ವಚ್ಛತಾ ಕಾರ್ಯಕ್ರಮ
  • ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ
  • ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಗೃಹ ಸಚಿವ ಡಾ.ಜಿ. ಪರಮೆಶ್ವರ್ ಅವರಿಗೆ ಸನ್ಮಾನ
  • ಹನಿ‌ ಸುರಿಸಿ ಮಾಯವಾದ ವರುಣ: ಮುಂದುವರಿದ ಮಳೆಯ ಕಣ್ಣಾ ಮುಚ್ಚಾಲೆ

ನಮ್ಮ ಬಗ್ಗೆ

ದಿ ಸುಳ್ಯ ಮಿರರ್ ಮಾಧ್ಯಮವು ಆಧುನಿಕ ಜಗತ್ತಿನ ವೇಗಕ್ಕೆ ಅನುಗುಣವಾಗಿ ಸುದ್ದಿಗಳನ್ನು ಅತ್ಯಂತ ವೇಗವಾಗಿ ಜನರಿಗೆ ತಲುಪಿಸುವ ಡಿಜಿಟಲ್ ಮಾಧ್ಯಮವಾಗಿದೆ. ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ನೇತೃತ್ವದಲ್ಲಿ ಕ್ರಿಯಾಶೀಲ ಮತ್ತು ವೃತ್ತಿಪರ ಪತ್ರಕರ್ತರ ತಂಡ ಸುದ್ದಿಗಳನ್ನು ಅತ್ಯಂತ ಸರಳವಾಗಿ ಮತ್ತು ವೇಗವಾಗಿ ಮನ ಮುಟ್ಟುವಂತೆ ಧನಾತ್ಮಕ ದೃಷ್ಠಿಕೋನದಲ್ಲಿ ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಜನಪರ, ಅಭಿವೃದ್ಧಿ ಪರ, ಪಾರದರ್ಶಕ ಮತ್ತು ಧನಾತ್ಮಕ ಪತ್ರಿಕೋದ್ಯಮ ನಮ್ಮ ಗುರಿ. ಜನರ ಆಶೋತ್ತರಗಳಿಗೆ ಧ್ವನಿಯಾಗುವ, ಸಮಸ್ಯೆಗಳಿಗೆ ಕನ್ನಡಿಯಾಗುವ ಆಶಯ ನಮ್ಮದು.ಗ್ರಾಮೀಣ ಭಾಗದಿಂದ ಆರಂಭಗೊಂಡು ಅಂತಾರಾಷ್ಟ್ರೀಯ ಮಟ್ಟದವರೆಗಿನ ಸುದ್ದಿಗಳ ಸಮೃದ್ಧಿಯ ಜೊತೆಗೆ, ವಿಶೇಷ ಲೇಖನಗಳು,ಮಾನವಸಾಕ್ತ ವರದಿಗಳು, ಹಿರಿಯ ಪತ್ರಕರ್ತರ, ಬರಹಗಾರರ ಅಂಕಣಗಳು ನಮ್ಮ ಮೀಡಿಯಾದಲ್ಲಿ ಓದುಗರನ್ನು ಮುಟ್ಟಲಿದೆ.

ಸಂಪರ್ಕಿಸಿ

ನಮ್ಮನ್ನು ಹೀಗೆ ಸಂಪರ್ಕಿಸಿ:

ಇ-ಮೇಲ್ ಐಡಿ: thesulliamirror@gmail.com
ದೂರವಾಣಿ ಸಂಖ್ಯೆ: 9008417480

ನಮ್ಮೊಂದಿಗೆ ಸಂಪರ್ಕದಲ್ಲಿರಿ

Facebook Twitter Whatsapp

2023 - Sullia Mirror. Website made with 🧡 by The Web People.

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ